ಡಿ.16ರಂದು ಪೇಜಾವರ ಶ್ರೀಗಳ ಷಷ್ಠ್ಯಬ್ದಿ: ಶಾಸಕ ಯಶ್​ಪಾಲ್​

UDP-18-7-Meeting
Published on

ಉಡುಪಿ: ಪೇಜಾವರ ಮಠಾಧೀಶ, ಅಯೋಧ್ಯಾ ಶ್ರೀರಾಮ ಮಂದಿರ ಟ್ರಸ್ಟ್​ನ ವಿಶ್ವಸ್ಥರೂ ಆದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಷಷ್ಠ್ಯಬ್ದಿ ಮಹೋತ್ಸವ ಆಚರಿಸುವ ಹಿನ್ನೆಲೆಯಲ್ಲಿ ಉಡುಪಿಯ ಸಮಸ್ತ ನಾಗರಿಕರ ಸಹಭಾಗಿತ್ವದಲ್ಲಿ ಗುರುವಂದನಾ ಕಾರ್ಯಕ್ರಮ ಆಚರಿಸಲು ಶಾಸಕ ಯಶ್​ಪಾಲ್​ ಸುವರ್ಣ ಅಧ್ಯಕ್ಷತೆಯ ಪೂರ್ವಭಾವಿ ಸಭೆ ನಿರ್ಧರಿಸಿದೆ.

ಗೋವಿಂದ ಕಲ್ಯಾಣ ಮಂಟಪದಲ್ಲಿ ಶನಿವಾರ ಸಾಯಂಕಾಲ ನಡೆದ ಸಭೆಯಲ್ಲಿ ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​, ಜಯಕರ ಶೆಟ್ಟಿ ಇಂದ್ರಾಳಿ, ಯೋಗೀಶ್​ ಶೆಟ್ಟಿ, ವಿಷ್ಣುಮೂರ್ತಿ ಆಚಾರ್ಯ, ಮಂಜುನಾಥ ಉಪಾಧ್ಯಾಯ, ಸೂರ್ಯನಾರಾಯಣ ಉಪಾಧ್ಯಾಯ, ಮುಡಾರು ದೇವಿಪ್ರಸಾದ ಶೆಟ್ಟಿ, ಶ್ರೀರಮಣ ಉಪಾಧ್ಯಾಯ, ದಯಾನಂದ ಸುವರ್ಣ, ದಿನೇಶ್​ ಪುತ್ರನ್​, ಬಾಲಾಜಿ ರಾವೇಂದ್ರ ಆಚಾರ್ಯ ಇತರರು ಉಪಸ್ಥಿತರಿದ್ದರು.

16ರಂದು ಕಾರ್ಯಕ್ರಮ: ಕಾರ್ಯಕ್ರಮದ ಕುರಿತಾಗಿ ವಾಸುದೇವ ಭಟ್​ ಪ್ರಾಸ್ತಾವಿಕವಾಗಿ ಮಾತನಾಡಿ, ಅಯೋಧ್ಯೆಯಲ್ಲಿ ರಾಮಮಂದಿರ ಟ್ರಸ್ಟ್​ನ ಪ್ರಮುಖ ಸದಸ್ಯರೂ ಶ್ರೀಗಳು ಇರುವುದರಿಂದ ಆ ಮಹತ್ತರ ಕಾರ್ಯದಲ್ಲಿ ಪೇಜಾವರ ಶ್ರೀಗಳು ತೊಡಗಿಕೊಂಡಿದ್ದಾರೆ. ಅದರ ನಡುವೆಯೇ ಡಿ.16ರಂದು ಒಂದು ದಿನ ಮಾತ್ರ ಕಾರ್ಯಕ್ರಮ ಆಯೋಜಿಸಲು ನಮಗೆ ಅವಕಾಶ ಲಭಿಸಿದ್ದು, ಅದೇ ದಿನ ಷಷ್ಟ$್ಯಬ್ದಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎಂದರು.

ಕೃಷ್ಣಾಪುರ ಶ್ರೀ ನೇತೃತ್ವ

ಶ್ರೀ ಕೃಷ್ಣ ಮಠದ ಪರ್ಯಾಯ ಕೃಷ್ಣಾಪುರ ಮಠದ ಶ್ರೀಗಳ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಷಷ್ಟ$್ಯಬ್ದಿ ಸಮಿತಿಗೆ ಶಾಸಕ ಯಶ್​ಪಾಲ್​ ಸುವರ್ಣ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಅವರ ಸೂಚನೆಯಂತೆ ಒಂದೆರಡು ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸಮಿತಿ ರಚಿಸಿಲು ಸಭೆ ನಿರ್ಧರಿಸಿತು. "ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಷಷ್ಟ$್ಯಬ್ದಿ ಗುರುವಂದನಾ ಸಮಾರಂಭ' ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು.

ಸ್ಮತಿ ವನ, ಲೇಡೀಸ್​ ಹಾಸ್ಟೆಲ್​
ಪೇಜಾವರ ಮಠದ ಜಾಗದಲ್ಲಿ ಹಿಂದಿನ ಶ್ರೀಗಳ ಸವಿನೆನಪಿಗಾಗಿ ಸ್ಮತಿ ವನ ನಿರ್ಮಿಸಲಾಗಿದೆ. ಅಲ್ಲಿಯೇ ಶ್ರೀ ವಿಶ್ವೇಶತೀರ್ಥ ಶ್ರೀಪಾದರ 15 ಅಡಿ ಎತ್ತರದ ಕುಳಿತ ಭಂಗಿಯಲ್ಲಿರುವ ಕಂಚಿನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಲೇಡೀಸ್​ ಹಾಸ್ಟೆಲ್​ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಲಿದೆ. ಈ ಎರಡೂ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ಬೆಳಗ್ಗೆ ಕೃಷ್ಣಮಠದಲ್ಲಿ ಒಂದು ಲಕ್ಷ ಸಂಖ್ಯೆಯಲ್ಲಿ ಕೃಷ್ಣನ ಮಂತ್ರವನ್ನೊಳಗೊಂಡ ಹೋಮ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net