ಕಡ್ಡಾಯ ಮತದಾನ ಅವಶ್ಯ: ಪೇಜಾವರ ಶ್ರೀ

udp-26-pejavara
Published on

ಉಡುಪಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತಿರ್ಥ ಸ್ವಾಮೀಜಿ ನಾರ್ತ್​ ಶಾಲೆಯಲ್ಲಿ ಮತದಾನ ನೆರವೇರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾನದ ಮೂಲಕ ತಮಗೆ ಬೇಕಾದ ಸರ್ಕಾರ ರೂಪಿಸುವ ದೊಡ್ಡ ಬದ್ಧತೆ ಪ್ರಜೆಗಳ ಮೇಲಿದೆ. ದೇಶದಲ್ಲಿ ಎಲ್ಲಾ ಬಗೆಯ ಜನ ಎಲ್ಲಾ ಕಾಲಕ್ಕೂ ಇರುತ್ತಾರೆ. ನೆಲದ ಸಂಸ್ಕತಿಯನ್ನು ಗೌರವಿಸುವ ಸರ್ಕಾರ ರೂಪಿಸುವ ಅವಕಾಶ ಲಭ್ಯವಾಗಿದೆ ಎಂದರು.

ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಚುನಾವಣೆ ಮೂಲಕ ಆಯ್ಕೆಯಾಗುವ ಪ್ರಧಾನಿ ಸರ್ವಾಧಿಕಾರಿ ಆಗುವುದು ಹೇಗೆ? ಪ್ರಜೆಗಳು ತಮಗೆ ಬೇಕಾದ ಸರ್ಕಾರ ರೂಪಿಸುತ್ತಿದ್ದಾರೆ. ಅದನ್ನು ಆಕ್ಷೇಪಿಸುವುದು ತರವಲ್ಲ. ಮತದಾನ ಪ್ರಮಾಣ ಕಡಿಮೆ ಆಗಬಾರದು. ವ್ಯವಸ್ಥೆ ನಮಗೆ ಅನುಕೂಲವಾಗಿಲ್ಲ ಅಂತ ದೂರುತ್ತೇವೆ. ಹಾಗಾದರೆ ವ್ಯವಸ್ಥೆಯನ್ನು ಸರಿ ಮಾಡುವುದು ಯಾರು? ಮತದಾನದಿಂದ ದೂರ ಉಳಿದವರಿಗೆ ದೇಶದ ನಾಗರಿಕತೆ ಕೊಡಬಾರದು. ಇದು ಕಠೋರ ನಿಲುವು ಆದರೂ ಅವಶ್ಯವಾಗಿಬೇಕು. ಸರ್ಕಾರ ನೀಡುವ ಸವಲತ್ತುಗಳನ್ನು ಬಂದ್​ ಮಾಡಬೇಕು. ಅವರನ್ನು ದ್ವೀತಿಯ, ತೃತೀಯ ದರ್ಜೆಯ ನಾಗರಿಕರನ್ನಾಗಿ ಪರಿಗಣಿಸಬೇಕು. ಆಗ ಪರಿಸ್ಥಿತಿ ಸುಧಾರಿಸಬಹುದು. ಪ್ರಜೆಗಳು ಎಚ್ಚೆತ್ತುಕೊಳ್ಳುತ್ತಿಲ್ಲ ಅಂದ್ರೆ ಕಠೋರ ನಿಲುವು ಅನಿವಾರ್ಯವಾಗುತ್ತದೆ. ನೋಟ ಜನರಿಗೊಂಡಿ ಆಯ್ಕೆ ಅಷ್ಟೇ. ಅದನ್ನು ಒತ್ತುವಂತೆ ಒತ್ತಡ ಹೇರು ಕೆಲಸ ಮಾಡಬಾರದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net