

ಉಡುಪಿ: ಸಂವಿಧಾನ ಬದ್ಧವಾಗಿ ಆಯ್ಕೆಯಾಗಿರುವ ಸರ್ಕಾರಗಳು ಜಾತ್ಯಾತಿತವಾಗಿ ಎಲ್ಲರನ್ನೂ ಸಮಭಾವದಿಂದ ಕಾಣುವಂತಿರಬೇಕು. ಅಧಿಕಾರಸ್ಥಾನದಲ್ಲಿ ಇರುವವರು ಎಲ್ಲರನ್ನ ಹೊಂದಿಸಿಕೊಂಡು ಹೋಗಬೇಕು. ಹಾಗಿದ್ದಾಗ ಮಾತ್ರ ನೆಮ್ಮದಿ ಬದುಕು ಸಾಧ್ಯ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಮುಖ್ಯಮಂತ್ರಿಗಳು ತಾವು ಒಂದು ಸಮುದಾಯದ ಪರವಾಗಿದ್ದೇವೆ ಎಂದು ಹೇಳುವುದು ಸರಿಯಲ್ಲ. ಎಲ್ಲಾ ಪ್ರಜೆಗಳಿಗೆ ಅನುಕೂಲ ಮಾಡಿಕೊಡಬೇಕು. ಯಾರಿಗೂ ತೊಂದರೆ ಆಗದಂತೆ ನೋಡಿಕೊಳ್ಳಬೇಕು.ಒಂದು ವರ್ಗವನ್ನು ಓಲೈಕೆ ಮಾಡಿ ನಿಮಗೆ ಇಷ್ಟು ಪಾಲು ಕೊಡುತ್ತೇವೆ. ಒಂದು ಸಮುದಾಯ ವರ್ಗದ ಜೊತೆ ನಿಲ್ಲುತ್ತೇವೆ ಎಂದರೆ ಹಿಂದೂ ಸಮಾಜಕ್ಕೆ ಅನಾಥಭಾವ ಕಾಡುತ್ತದೆ. ಇಂತಹ ಹೇಳಿಕೆಯಿಂದ ಹಿಂದೂ ಸಮಾಜಕ್ಕೆ ನೋವಾಗುತ್ತದೆ ಎಂದು ತಿಳಿಸಿದ್ದಾರೆ.