ಹರಿದ್ವಾರದಲ್ಲಿ ಪೇಜಾವರ ಶ್ರೀ ಹಾಗೂ ಕಾಶೀ ಮಠಾಧೀಶರ ಸಮಾಗಮ

IMG-20220626-WA0020
Published on

ಮಂಗಳೂರು: ಉಡುಪಿ ಶ್ರೀ ಪೇಜಾವರದ ಅಧೋಕ್ಷಜ ಮಠದ ಪೀಠಾಧಿಪತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸಾಮೀಜಿ ಕಾಶೀ ಮಠ ಸಂಸ್ಥಾನದ ಹರಿದ್ವಾರ ಪುಣ್ಯಕ್ಷೇತ್ರದಲ್ಲಿರುವ ಶ್ರೀವ್ಯಾಸ ಆಶ್ರಮದ ಶ್ರೀವ್ಯಾಸ ಮಂದಿರ, ಸದ್ಗುರು ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ವೃಂದಾವನಕ್ಕೆ ಭೇಟಿ ನೀಡಿದರು. ಬಳಿಕ ವ್ಯಾಸ ಘಾಟ್‌ ನಲ್ಲಿ ಗಂಗಾ ದರ್ಶನ ಮಾಡಿದರು. ಈ ವೇಳೆ ಶ್ರೀಕಾಶಿ ಮಠ ಸಂಸ್ಥಾನದ ಮಠಾಧೀಶ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಪೇಜಾವರ ಶ್ರೀಗಳನ್ನು ಆತ್ಮೀಯವಾಗಿ ಬರಮಾಡಿ ಸ್ವಾಗತಿಸಿದರು. ಉಭಯ ಯತಿಗಳವರು ಪರಸ್ಪರ ಪುಷ್ಪ ಮಾಲಾರ್ಪಣೆ ಮೂಲಕ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಪೇಜಾವರ ಶ್ರೀಗಳು ಮಾತನಾಡಿ, ಶ್ರೀಗಳವರ ಬಾಂಧವ್ಯ, ಸ್ನೇಹ ಕಂಡು ತುಂಬಾ ಸಂತೋಷವಾಯಿತು. ನಮ್ಮೆಲ್ಲರಿಗೂ ಮೂಲಗುರುಗಳಾದ ಮಧ್ವಾಚಾರ್ಯರನ್ನು ಸ್ಮರಿಸುತ್ತಾ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ರಾಮಚಂದ್ರ ದೇವರ ಮಂದಿರಕ್ಕೆ ಶ್ರೀಗಳವರು ಸಂಸ್ಥಾನ ಹಾಗೂ ಭಕ್ತಜನರು ವತಿಯಿಂದ ನೀಡಿದ ಕೊಡುಗೆಯನ್ನು ಸಂತೋಷದಿಂದ ಸ್ವೀಕರಿಸಲಾಗಿದೆ ಎಂದರು. ಇದೇ ವೇಳೆ ತಮ್ಮ ಗುರುಗಳಾದ ವೃಂದಾವನಸ್ಥ ಪರಮಪೂಜ್ಯ ಶ್ರೀ ವಿಶ್ವೇಶತೀರ್ಥರು ಹರಿದ್ವಾರಕ್ಕೆ ಬಂದ ಸಂದರ್ಭದಲ್ಲಿ ವ್ಯಾಸಾಶ್ರಮದಲ್ಲಿರುವ ವ್ಯಾಸಘಾಟ್‌ಗೆ ಬಂದು ಪುಣ್ಯ ಗಂಗಾಸ್ನಾನ, ಶ್ರೀ ದೇವರಿಗೆ ಪೂಜೆ ಮಾಡುತ್ತಿದ್ದರು ಎಂದು ಸ್ಮರಿಸಿದರು.
ಕೊಚ್ಚಿ ತಿರುಮಲ ದೇವಳದ ಮೊಕ್ತೇಸರ ಜಗನ್ನಾಥ ಶೆಣೈ , ಜಿಎಸ್ ಬಿ ಸೇವಾಮಂಡಳದ ಆರ್.ಜಿ. ಭಟ್‌, ದೆಹಲಿ ಜಿಎಸ್ ಬಿ ಸಮಾಜದ ಪ್ರಕಾಶ್ ಪೈ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net