ಎಬಿಎಂಎಂ ಹಾಸ್ಟೆಲ್ ಗೆ ಶ್ರೀಗಳ ಭೇಟಿ

IMG-20240603-WA0013_1-1.jpg
Published on

ಹುಬ್ಬಳ್ಳಿ: ಇಲ್ಲಿಯ ಅಖಿಲ ಭಾರತ ಮಾಧ್ವ ಮಹಾಮಂಡಲದ ಎಬಿಎಂಎಂ ಬಾಲಕರ ಹಾಸ್ಟೆಲ್ ಗೆ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಭೇಟಿ ನೀಡಿ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಶ್ರೀಗಳಿಗೆ ಪುಷ್ಪ ಪಥ ಹಾಗೂ ಪುಷ್ಪವೃಷ್ಟಿ ಮುಖಾಂತರ ಸ್ವಾಗತ ಕೋರಲಾಯಿತು. ಕರ್ನಾಟಕ ಬ್ಯಾಂಕ್ ವತಿಯಿಂದ ದೇಣಿಗೆಯಾಗಿ ನೀಡಿದ 6.40 ಲಕ್ಷ ಮೊತ್ತದಲ್ಲಿ ಅಳವಡಿಸಲಾದ ಪೇವರ್ಸ್ ಕಾಮಗಾರಿಯನ್ನು ಶ್ರೀಗಳು ಉದ್ಘಾಟಿಸಿದರು.

ವಾದಿರಾಜ ಸೇವಾ ಪ್ರತಿಷ್ಠಾಪನದ ಅಧ್ಯಕ್ಷ ಶ್ರೀಕಾಂತ ಕೆಮತೂರು, ಕಾರ್ಯದರ್ಶಿ ಅನಂತ ಪದ್ಮನಾಭ ಐತಾಳ್, ಖಜಾಂಜಿ ಗುರುರಾಜ ಬಾಗಲಕೋಟೆ, ಕರ್ನಾಟಕ ಬ್ಯಾಂಕ್ ಎಜಿಎಂ ಎಸ್.ಆರ್. ವಿಶ್ವನಾಥ್, ಚೀಫ್ ಮ್ಯಾನೇಜರ್ ಸಂಜೀವ್ ಗಲಗಲಿ, ಹಿರಿಯ ಮ್ಯಾನೇಜರ್ ಪಿ. ನಾಗೇಂದ್ರ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net