ದಲಿತರ ಕಾಲನಿಯಲ್ಲಿ ಪೇಜಾವರ ಶ್ರೀ ಪಾದಯಾತ್ರೆ

dalitkeri
Published on

ಹುಬ್ಬಳ್ಳಿ: ಇಲ್ಲಿಯ ಭುವನೇಶ್ವರಿ ನಗರದ ದಲಿತರ ಕಾಲನಿಯಲ್ಲಿ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಗುರುವಾರ ಪಾದಯಾತ್ರೆ ನಡೆಸಿದರು.

ವಿಶ್ವ ಹಿಂದು ಪರಿಷತ್​ನ ಸಂಪರ್ಕ ಪ್ರಮುಖ ಯಲ್ಲಪ್ಪ ಬಾಗಲೋಟಿ ಅವರ ಮನೆಗೆ ಭೇಟಿ ನೀಡಿದರು. ಬಳಿಕ ಕಾಲನಿಯ ಭುವನೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು.

ದೇವಸ್ಥಾನದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು, ಮಕರ ಸಂಕ್ರಮಣದ ನಂತದ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಲಿದೆ. ನಾವೆಲ್ಲರೂ ನಿತ್ಯ ಐದು ದೀಪಗಳನ್ನು ಬೆಳಗುವ ಮೂಲಕ ಶ್ರೀರಾಮನ ಆರಾಧನೆ ಮಾಡೋಣ ಎಂದರು.

ಹಲವು ವರ್ಷಗಳ ಹೋರಾಟದ ಬಳಿರ ರಾಮಮಂದಿರ ನಿರ್ವಣವಾಗುತ್ತಿದೆ. ರಾಮ ಆದರ್ಶ ಪುರುಷ. ರಾವಣ ಕೆಟ್ಟ ಗುಣದ ಸಂಕೇತ. ಸುಖ, ಸಂತೋಷಕ್ಕೆ ರಾಮನ ಆರಾಧನೆ ಮಾಡೋಣ. ಇನ್ನೊಬ್ಬರನ್ನು ಬಡಿಯುತ್ತೇವೆ, ಕಡಿಯುತ್ತೇವೆ ಎನ್ನುವುದು ರಾವಣನ ಗುಣ. ಎಲ್ಲರೂ ರಾಮನ ಜಪ ಮಾಡೋಣ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net