

ಉಡುಪಿ: ಪಯಾರ್ಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರ ಸಂನ್ಯಾಸ ಜೀವನಕ್ಕೆ 2024ರ ಏಪ್ರಿಲ್ ತಿಂಗಳು 50 ವಸಂತಗಳನ್ನು ಪೂರೈಸಿದ ಸುವರ್ಣ ಸಂಭ್ರಮದ ವರ್ಷವಾಗಿದೆ.
1974ರ ಏಪ್ರಿಲ್ 8ರಂದು 12ನೇ ವಯಸ್ಸಿನಲ್ಲಿ ಸಂನ್ಯಾಸ ಸ್ವೀಕರಿಸಿ ಪೀಠಾಧಿಪತಿಗಳಾದ, ಪ್ರಸಕ್ತ ಶ್ರೀ ಕೃಷ್ಣಮಠದ ಪರ್ಯಾಯ ಸ್ವಾಮಿಗಳಾದ ಪುತ್ತಿಗೆ ಮಠದ ಶ್ರೀಗಳ ಈ ವಿಶೇಷ ಸಂದರ್ಭವನ್ನು ಅರ್ಥಪೂರ್ಣವಾಗಿ ಆಚರಿಸಿಲು ಶ್ರೀಗಳ ಶಿಷ್ಯ ಹಾಗೂ ಅಭಿಮಾನಿ ಬಳಗವು ನಿರ್ಧರಿಸಿದೆ.