ಮಕ್ಕಳ ಸೃಜನಶೀಲತೆಗೆ ಬಾಲಭವನ ಅಗತ್ಯ- ಸಚಿವ

raichur
raichur
Published on

ರಾಯಚೂರು: ಮಕ್ಕಳಲ್ಲಿ ಸೃಜನಶೀಲ ಅನ್ವೇಷಣೆಗಳಿಗೆ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ನಗರದಲ್ಲಿ ಬಾಲ ಭವನ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಣ್ಣ ನೀರಾವರಿ ಇಲಾಖೆ ಸಚಿವ ಎನ್.ಎಸ್.ಬೋಸರಾಜು ವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಅವರೊಂದಿಗೆ ದೂರವಾಣಿ ಮುಖಾಂತರ ಮಾತನಾಡಿ ಚರ್ಚಿಸಿದರು.

ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೆಶಕರ ಕಚೇರಿಗೆ ಶನಿವಾರ ಭೇಟಿ ನೀಡಿ, ಇಲಾಖೆಯ ಕಾರ್ಯವೈಕರಿಯನ್ನು ಪರಿಶೀಲಿಸಿ ಇಲಾಖೆಯ ಉಪ ನಿರ್ದೇಶಕರಾದ ನವೀನ್ ಕುಮಾರ ಅವರೊಂದಿಗೆ ಇಲಾಖೆ ಪ್ರಗತಿ ಹಾಗೂ ಬಾಲ ಭವನದ ಕುರಿತು ಮಾಹಿತಿ ಪಡೆದು ಬಾಲ ಭವನ ನಿರ್ಮಾಣದ ಕುರಿತು ಚರ್ಚಿಸಿ, ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ನಂತರ ಮಾಜಿ ಸಿಎಂ ದಿ.ಡಿ.ದೇವರಾಜ ಅರಸು ಅವರ ಪುತ್ತಳಿ ನಿರ್ಮಾಣದ ಸ್ಥಳವನ್ನು ವಿಕ್ಷಣೇ ಮಾಡಿದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೆಶಕ ನವೀನ್ ಕುಮಾರ, ಪಾಲಿಕೆ ಪ್ರಭಾರಿ ಅಧ್ಯಕ್ಷ ಸಾಜಿದ್ ಸಮೀರ್, ಮುಖಂಡರಾದ ಕೆ ಶಾಂತಪ್ಪ, ಮೊಹ್ಮದ್ ಶಾಲಂ, ಜಿ ಶಿವಮೂರ್ತಿ, ಅಮರೇಗೌಡ ಹಂಚಿನಾಳ, ರುದ್ರಪ್ಪ ಅಂಗಡಿ, ದಾನನಗೌಡ ಸಿರವಾರ, ಬಸವರಾಜ ಪಾಟೀಲ್ ಅತ್ತನೂರು, ರಮೇಶ್ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net