ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ

18-kkr2(10-23
Published on

ಕಿಕ್ಕೇರಿ: ಪಟ್ಟಣದಲ್ಲಿ ವೀರಭದ್ರೇಶ್ವರ ಸ್ವಾಮಿಯ ಹಬ್ಬವನ್ನು ಬೆಳ್ಳಳ ಹೊಕ್ಕಲು ಸಮುದಾಯದವರಿಂದ ಮಂಗಳವಾರ ಆಚರಿಸಲಾಯಿತು.


ಹಬ್ಬದ ಅಂಗವಾಗಿ ಸಮುದಾಯದ ಮುಖಂಡರೊಂದಿಗೆ ಮಹಿಳೆಯರು ತೆಂಗಿನ ತೋಟಕ್ಕೆ ತೆರಳಿ ವೀರಭದ್ರೇಶ್ವರಸ್ವಾಮಿ ಹಾಗೂ ಸ್ವಾಮಿಯ ಭಂಟರ ಗದ್ದುಗೆ ನಿರ್ಮಿಸಿದರು. ಬಳಿಕ ಪುಷ್ಪಗಳಿಂದ ಸಿಂಗರಿಸಿ ಧೂಪಧಾರತಿ ಬೆಳಗಿದರು. ಬೆಲ್ಲದನ್ನ, ಹಣ್ಣುಕಾಯಿ ರಸಾಯನದ ನೈವೇದ್ಯವನ್ನು ದೇವರಿಗೆ ಸಮರ್ಪಿಸಿದರು. ಕುಟುಂಬಕ್ಕೊಂದರಂತೆ ದೇವರಿಗೆ ಎಡೆ ಇಟ್ಟು ಪೂಜೆ ಸಲ್ಲಿಸಲಾಯಿತು. ಬಳಿಕ ನೆಂಟರಿಷ್ಟರೊಂದಿಗೆ ಸಮುದಾಯದವರು ಭೋಜನ ಸವಿದರು.

ಮುಖಂಡರಾದ ಕೆ.ಜಿ.ಪುಟ್ಟರಾಜು, ಕೆಇಬಿ ಜಯಪಾಲ್, ಮಹದೇವು, ಕೆ.ಜಿ.ಪಾಪಣ್ಣ, ಕೆ.ಜೆ.ತಮ್ಮಣ್ಣ, ಪಾಂಡು, ಅಣ್ಣಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net