

ಮಡಿಕೇರಿ
ಕರ್ನಾಟಕ ಹಾಕಿ ತಂಡದ ಉಪನಾಯಕಿಯಾಗಿ ಕೊಡಗು ವಿದ್ಯಾಲಯದ ವಿದ್ಯಾರ್ಥಿನಿ ಪರ್ಲಿನ್ ಪೊನ್ನಮ್ಮ ಆಯ್ಕೆಯಾಗಿದ್ದಾರೆ. ಜೂ. ೨೬ರಂದು ನಡೆದ ಹಾಕಿ ಕರ್ನಾಟಕ ಸಬ್ ಜೂನಿಯರ್ ಪುರುಷ ಹಾಗೂ ಮಹಿಳೆಯರ ಹಾಕಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳಾದ ನಮನ್ ಆರ್, ಆದಿತ್ಯ ದಿನಕರ್, ಚರೀಶ್ ಉತ್ತಯ್ಯ, ಪರ್ಲ್ಲಿನ್ ಪೊನ್ನಮ್ಮ, ನೀತು ಚೌದರಿ, ಜಾಸ್ಮಿನ್ ಫೆಲ್ಲಾ ಹಾಗೂ ವರ್ಣ ಬೋಜಮ್ಮ ರಾಜ್ಯ ಮಟ್ಟದ ಹಾಕಿ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.
ಇವರ ಪೈಕಿ ಪರ್ಲ್ಲಿನ್ ಪೊನ್ನಮ್ಮ ಇದೇ ತಿಂಗಳು ೧೯ ರಿಂದ ೨೬ರವರೆಗೆ ಕೊಲ್ಲಂನಲ್ಲಿ ಹಾಕಿ ಇಂಡಿಯಾ ನಡೆಸುವ ದಕ್ಷಿಣ ವಲಯ ಮಟ್ಟದ ಹಾಕಿ ಚಾಂಪಿಯನ್ ಶಿಪ್‌ಗೆ ಕರ್ನಾಟಕ ಹಾಕಿ ತಂಡದ ಉಪನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಕೆ ಮಡಿಕೇರಿಯ ವಕೀಲರಾದ ಅಚ್ಚಪಂಡ ಗಿರಿ ಮತ್ತು ಪದ್ಮ ದಂಪತಿ ಪುತ್ರಿ.