

ಮಡಿಕೇರಿ: ಕೊಡಗು ವಿದ್ಯಾಲಯದ ೧೦ನೇ ತರಗತಿ ವಿದ್ಯಾರ್ಥಿನಿ ಪರ್ಲಿನ್ ಪೊನ್ನಮ್ಮ ಅ.೨೯ ರಿಂದ ನ.೧೪ ರವರೆಗೆ ಪೊನ್ನಂಪೇಟೆಯಲ್ಲಿ ನಡೆದ ಮಹಿಳೆಯರ ಸಬ್ ಜೂನಿಯರ್ ರಾಜ್ಯ ಹಾಕಿ ತಂಡದ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಕರ್ನಾಟಕ ಹಾಕಿ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ.
ನ.೨೨ ರಿಂದ ಡಿ.೨ ರವರೆಗೆ ಹೈದರಾಬಾದ್‌ನಲ್ಲಿ ನಡೆಯಲಿರುವ ೧೪ನೇ ಹಾಕಿ ತಂಡ ಸಬ್ ಜೂನಿಯರ್ ಮಹಿಳೆಯರು ರಾಷ್ಟ್ರೀಯ ಚಾಂಪಿಯನ್ ಶಿಪ್ ೨೦೨೪ರಲ್ಲಿ ತಂಡದ ನಾಯಕಿಯಾಗಿ ಪರ್ಲಿನ್ ಭಾಗವಹಿಸಲಿದ್ದಾರೆ. ಇವರು ಮಡಿಕೇರಿ ವಕೀಲ ದಂಪತಿ ಅಚ್ಚಪಂಡ ಗಿರಿ ಹಾಗೂ ಪದ್ಮ ದಂಪತಿ ಪುತ್ರಿಯಾಗಿದ್ದಾಳೆ.