ಪಾವಗಡದಲ್ಲಿ ಶೇಂಗಾ ಬೆಳೆಗೆ ಕರಿಸೀಡೆ ಬಾಧೆ ; ಇಳುವರಿ ಮೇಲೆ ಬೀರಲಿದೆ ಪರಿಣಾಮ

12 pvg 3
Published on

ಪಾವಗಡ: ತಾಲೂಕಿನ ಹಲವು ಭಾಗಗಳಲ್ಲಿ ಶೇಂಗಾ ಗಿಡಕ್ಕೆ ಎಲೆತಿನ್ನುವ ಹುಳುಗಳ ಕಾಟದ ಜತೆಗೆ ಕರಿಸೀಡೆ ಬಾಧೆ ಕಾಡತೊಡಗಿದ್ದು, ಮುಂಗಾರಿನಲ್ಲಿ ಮಳೆಯಾಶ್ರಿತ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕೃಷಿ ಇಲಾಖೆ ಮೂಲಗಳ ಪ್ರಕಾರ ತಾಲೂಕಿನಲ್ಲಿ ಮುಂಗಾರು ವಾಡಿಕೆ ಮಳೆ 191 ಮಿ.ಮೀ.ಇದೆ. ಈ ಬಾರಿ ಇಲ್ಲಿಯವರೆಗೆ 244 ಮಿ.ಮೀ.ಮಳೆಯಾಗಿದ್ದು, ವಾಡಿಕೆಗಿಂತ 28 ಮಿ.ಮೀ.ಹೆಚ್ಚಾಗಿಯೇ ಮಳೆಯಾಗಿದೆ. ಇಲಾಖೆ ತಾಲೂಕಿನ 62 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಗುರಿ ಹೊಂದಿತ್ತು. ಆ ಪೈಕಿ ಮೇ, ಜೂನ್ ಹಾಗೂ ಜುಲೈನಲ್ಲಿ ಬಂದ ಮಳೆಗೆ 46,290ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಶೇಂಗಾ ಬಿತ್ತನೆ ವಾಡಲಾಗಿದೆೆ. ಅಷ್ಟಿಷ್ಟು ಬೇಸಾಯ ಮಾಡಿದ್ದ ಶೇಂಗಾ ಗಿಡಕ್ಕೆ ದಿಢೀರನೆ ಕರಿಸೀಡೆ ಬಾಧೆ ಆವರಿಸಿದೆ.

ತಾಲೂಕಿನ ಶೈಲಾಪುರ, ಗುಜ್ಜನಡು, ರಾಮಯ್ಯನ ಪಾಳ್ಯ, ದೇವಲಕೆರೆ, ಚಿನ್ನಮ್ಮನಹಳ್ಳಿ, ಮಂಗಳವಾಡ, ದೇವರಬೆಟ್ಟ, ಕೋಣನಕುರಿಕೆ, ಕರೆಕ್ಯಾತನಹಳ್ಳಿ, ನಲಿಗಾನಹಳ್ಳಿ ಸೇರಿ ಇನ್ನು ಹಲವು ಭಾಗಗಳಲ್ಲಿ ಈ ಬೆಳೆ ಚಿಗುರಿ ಹೂ ಬಿಡುವ ಹಂತದಲ್ಲಿದ್ದು, ಈಗ ಕರಿಸೀಡೆ ಬಾಧೆ ಇಳುವರಿ ಮೇಲೆ ಪರಿಣಾಮ ಬೀರಲಿದೆ ಎಂದು ರೈತರು ಆತಂಕದಲ್ಲಿದ್ದಾರೆ.

ಇತ್ತೀಚೆಗೆ ಮೊಡಕವಿದ ವಾತಾವರಣ ವಿರುವುದರಿಂದ ಶೇಂಗಾ ಗಿಡಕ್ಕೆ ಕರಿಸೀಡೆ ಬಾಧೆ ಕಂಡು ಬಂದಿದ್ದು, ರೋಗರ್ 2 ಮೀ.ಲೀ. ಅನ್ನು 1 ಲೀಟರ್ ನೀರಿಗೆ ಬೆರಸಿ ಸಿಂಪಡಣೆ ವಾಡುವುದರಿಂದ ಕರಿಸೀಡೆ ಬಾಧೆ ಹತೋಟಿಗೆ ಬರಲಿದೆ. ಈ ಬಗ್ಗೆ ರೈತರಿಗೆ ಸಲಹೆ ನೀಡಲಾಗಿದೆ. ವಿಜಯಾ ಮೂರ್ತಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ, ಪಾವಗಡ ಜೂನ್‌ನಲ್ಲಿ ಬಂದ ಉತ್ತಮ ಮಳೆಗೆ 50 ಕೆ.ಜಿ ಶೇಂಗಾ ಬಿತ್ತನೆ ವಾಡಲಾಗಿದೆ. ಗಿಡ ಹೂ ಬಿಡುವ ಹಂತದಲ್ಲಿದ್ದು, ಈಗ ಗಿಡಕ್ಕೆ ಬಾಧೆ ಆವರಿಸಿದೆ. ಹುಳುಗಳು ರಸಹೀರುವುದರಿಂದ ಶೇಂಗಾ ಗಿಡ ನಿರುಪಯುಕ್ತವಾಗಿ ಇಳುವರಿ ಮೇಲೆ ಪರಿಣಾಮ ಬೀರಲಿದೆ. ಸಾಲ ಮಾಡಿ ಬೇಸಾಯ ಮಾಡಿದ್ದು, ಬೆಳೆಗೆೆ ಹಾಕಿರುವ ಬಂಡವಾಳ ವಾಪಾಸ್ ಬರುತ್ತದೋ ಇಲ್ಲವೋ ಎಂಬುವ ಆತಂಕ ಕಾಡುತ್ತಿದೆ. ಈರಕ್ಯಾತಪ್ಪ ದವಡಬೆಟ್ಟ ಶೇಂಗಾ ಬೆಳೆಗಾರ ಜಮೀನಿನಲ್ಲಿ ಶೇಂಗಾವನ್ನು ಬಿತ್ತನೆ ವಾಡಿದ್ದು, ಗಿಡ ಹೂ ಬಿಡುವ ಹಂತದಲ್ಲಿದೆ. ಬೆಳೆಗೆ ಕರಿಸೀಡೆ ಬಾಧೆ ಕಾಟವಿರುವುದರಿಂದ ಆತಂಕ ಉಂಟಾಗಿದೆ. ಕೃಷಿ ಇಲಾಖೆ ಅಧಿಕಾರಿಗಳು ರೈತರು ಶೇಂಗಾ ಬೆಳೆಯಿಟ್ಟಿರುವ ತಾಕುಗಳಿಗೆ ಭೇಟಿ ನೀಡಿ ಈ ಸೀಡೆಯನ್ನು ತಡೆಗಟ್ಟಲು ರೈತರಿಗೆ ವಾರ್ಗದರ್ಶನ ನೀಡಲಿ. ಪ್ರಸಾದ್ ಕೋಣನಕುರಿಕೆ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net