ನಾಡಿನಲ್ಲೂ ನವಿಲು ಕುಣಿಯುತಿದೆ ನೋಡೆ... : ಗಿಡಮರಗಳ ಅವನತಿ ಪರಿಣಾಮ : ಗ್ರಾಮೀಣ ಭಾಗದ ಬಯಲಲ್ಲೂ, ನಗರದ ರಾಜರಸ್ತೆಗಳಲ್ಲೂ ಪ್ರತ್ಯಕ್ಷ

New Project (12)
Published on

ಅನ್ಸಾರ್ ಇನೋಳಿ ಉಳ್ಳಾಲ

ಮಾನವನ ಸ್ವಾರ್ಥಕ್ಕಾಗಿ ಕಾಡು ನಾಶವಾಗಿದೆ. ಗ್ರಾಮೀಣ ಭಾಗದಲ್ಲೂ ಕಾಡುಗಳಿದ್ದ ಪ್ರದೇಶ ವಸತಿ ಪ್ರದೇಶವಾಗಿ ಪರಿವರ್ತಿತವಾಗಿದೆ. ಇದರ ಪರಿಣಾಮ ಕಾಡಿನಲ್ಲಿ ವಾಸಿಸುತ್ತಿದ್ದ ನವಿಲುಗಳು ನಾಡಿಗೆ ವಲಸೆ ಬಂದು ನೆಲೆ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಪ್ರಸ್ತುತ ದಿನಗಳಲ್ಲಿ ರಾಜರಸ್ತೆಗಳಲ್ಲೂ ನವಿಲುಗಳ ದರ್ಬಾರ್ ಕಾಣಲು ಸಿಗುವಂತಾಗಿದೆ.

ಹಿಂದೆ ಗ್ರಾಮೀಣ ಭಾಗದಲ್ಲಿ ಮನೆ, ಕಟ್ಟಡಗಳ ಸಂಖ್ಯೆ ಕಡಿಮೆಯಿದ್ದು ಹೆಚ್ಚಿನ ಪ್ರದೇಶ ಕಾಡಿನಿಂದ ಆವೃತವಾಗಿತ್ತು. ಆ ದಿನಗಳಲ್ಲಿ ಮಕ್ಕಳು ರಾಷ್ಟ್ರ ಪಕ್ಷಿ ನವಿಲುಗಳ ಬಗ್ಗೆ ಪಠ್ಯಪುಸ್ತಕದಲ್ಲಿ ತಿಳಿದು ಫೋಟೋ ನೋಡಿ ಖುಷಿಪಡುತ್ತಿದ್ದರು. ಇಲ್ಲವೇ ಮೃಗಾಲಯಗಳಿಗೆ ಹೋಗಿ ನೋಡಬೇಕಾಗಿತ್ತು.

ಆದರೆ ಅಭಿವೃದ್ಧಿಯ ನಾಗಾಲೋಟದ ಪ್ರಭಾವ ಕಾಡುಪಕ್ಷಿಗಳ ಮೇಲೆ ಬಿದ್ದಿದೆ. ಪ್ರತಿದಿನವೂ ಮರಗಳು ನಾಶವಾಗಿದ್ದು ಆ ಜಾಗದಲ್ಲಿ ಮನೆಗಳು, ಕಟ್ಟಡಗಳು ಎದ್ದು ನಿಂತಿವೆ. ಇದ್ಯಾವುದೂ ಇಲ್ಲದಿದ್ದರೂ ಮರಗಳನ್ನು ಕಡಿದು ಜಾಗವನ್ನು ಲೇಔಟ್‌ಗಾಗಿ ಮೀಸಲಿಡಲಾಗಿದೆ. ಇದರ ಪರಿಣಾಮವಾಗಿ ಕಾಡುಪಕ್ಷಿಗಳು ಅದರಲ್ಲೂ ಪ್ರಮುಖವಾಗಿ ರಾಷ್ಟ್ರಪಕ್ಷಿ ನವಿಲುಗಳು ನಾಡಿಗೆ ಬಂದಿವೆ.

ಇಂದು ಗ್ರಾಮೀಣ ಭಾಗ ಮಾತ್ರವಲ್ಲದೆ ನಗರ ಪ್ರದೇಶಗಳ ರಾಜರಸ್ತೆಗಳು, ಮನೆಯಂಗಳದಲ್ಲಿ ಯಾವುದೇ ಹೆದರಿಕೆಯಿಲ್ಲದೆ ನವಿಲುಗಳು ಓಡಾಡುವುದು ಮಾತ್ರವಲ್ಲದೆ ಹೊಡೆದಾಡುವುದೂ ಕಂಡು ಬರುತ್ತಿದೆ. ನವಿಲುಗಳನ್ನು ನೋಡುವುದೇ ಒಂದು ರೀತಿಯ ಖುಷಿಯ ವಿಚಾರ ಎನ್ನುವ ಕಾರಣಕ್ಕೆ ಕೆಲವರು ಮನೆಯಂಗಳಕ್ಕೆ ಅತಿಥಿಗಳಾಗಿ ಬರುವ ನವಿಲುಗಳಿಗೆ ಆಹಾರದ ವ್ಯವಸ್ಥೆ ಮಾಡುತ್ತಿದ್ದು ಇದರಿಂದಾಗಿ ಕಾಡುಪಕ್ಷಿಯಿಂದ ನಾಡಪಕ್ಷಿಯಾಗಿ ಮಾರ್ಪಟ್ಟಿದೆ.

ಕೃಷಿಕರಿಗೆ ಕಂಟಕ, ಹಾವುಗಳಿಗೆ ಆತಂಕ!

ನವಿಲುಗಳು ನಾಡಿಗೆ ಬಂದಿರುವುದರಿಂದ ಪಕ್ಷಿಪ್ರಿಯರಿಗೆ ಮುದ ನೀಡಿದ್ದರೆ ಹಾವುಗಳು ನಾಡಿನ ನಂಟು ಕಳೆದುಕೊಳ್ಳತೊಡಗಿವೆ. ಇದೇ ವೇಳೆ ಕೃಷಿ ಹಾಳು ಮಾಡುವುದರಿಂದ ಕೃಷಿಕರಿಗೂ ಕಂಟಕವಾಗಿ ಪರಿಣಮಿಸಿದೆ. ಆದರೆ ಇದಕ್ಕೆ ಕಡಿವಾಣ ಹಾಕುವುದು ಅಸಾಧ್ಯ. ಯಾಕೆಂದರೆ ಈಗಾಗಲೇ ಜನರು ತಮ್ಮ ಸ್ವಾರ್ಥಕ್ಕಾಗಿ ಗಿಡಮರಗಳನ್ನು ಕಡಿದು ಕಾಡನ್ನು ಇಲ್ಲವಾಗಿಸಿ ಕಾಡು ಪಕ್ಷಿಗಳ ನೆಲೆಯನ್ನೇ ಕಸಿದಿದ್ದಾರೆ ತಾನೇ?

ಇತ್ತೀಚಿನ ದಿನಗಳಲ್ಲಿ ನವಿಲುಗಳು ನಾಡಿಗೆ ಬರುತ್ತಿದ್ದು ಭತ್ತ ಹಾಗೂ ಇತರ ಕೃಷಿಗೆ ಹಾನಿ ಮಾಡುವುದರಿಂದ ಕೃಷಿಕರಿಗೆ ತೊಂದರೆಯಾಗಿದೆ. ಇದೇ ವೇಳೆ ತೋಟ, ಗದ್ದೆಗಳಿಗೆ ಹಾವುಗಳು ಬರುವುದು ಕಡಿಮೆಯಾಗಿದೆ. ರಾಷ್ಟ್ರಪಕ್ಷಿ ಆಗಿರುವುದರಿಂದ ನಾವೇನೂ ಮಾಡುವಂತಿಲ್ಲ. ಗಿಡಮರಗಳನ್ನು ಕಡಿದ ಜನರ ಸ್ವಾರ್ಥವೂ ಇದಕ್ಕೆ ಕಾರಣ. ಎ.ಕೆ.ಅಬ್ದುಲ್ ರಹ್ಮಾನ್ ಕೋಡಿಜಾಲ್ ಕೃಷಿಕ ಸಣ್ಣವರಿರುವಾಗ ಪುಸ್ತಕಗಳಲ್ಲಿ ರಾಷ್ಟ್ರಪಕ್ಷಿ ನವಿಲಿನ ಫೋಟೋ ನೋಡಿ ಕಣ್ಣಾರೆ ಕಾಣುವ ಹಂಬಲವಿತ್ತು. ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ನಮ್ಮದೇ ರಸ್ತೆಗಳಲ್ಲಿ ಸಾಕಷ್ಟು ನವಿಲುಗಳು ಕಾಣ ಸಿಗುತ್ತಿದ್ದು ಮನೆಯ ಅಂಗಳಕ್ಕೂ ಬರುತ್ತಿದ್ದು ಇವುಗಳಲ್ಲಿ ನೋಡುವುದೇ ಖುಷಿಯ ವಿಚಾರ. ತನ್ವಿ ಎಂ.ನಡಾರ್ ಆಸ್ಸಿಸಿ ಶಾಲಾ 9ನೇ ತರಗತಿ ವಿದ್ಯಾರ್ಥಿನಿ https://www.vijayavani.net/special-awareness-programme https://www.vijayavani.net/alvas-colleges-of-physiotherapy-nursing-nursing-sciences-and-allied-health-sciences-anniversary

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net