ಶಾಂತಿಯುತವಾಗಿ ಹಬ್ಬ ಆಚರಿಸಬೇಕು

5Yaragatti1
ಯರಗಟ್ಟಿಯಲ್ಲಿ ಹಮ್ಮಿಕೊಂಡಿದ್ದ ಶಾಂತಿ ಪಾಲನಾ ಸಭೆಯಲ್ಲಿ ಡಿವೆಎಸ್ಪಿ ರಾಮನಗೌಡ ಹಟ್ಟಿ ಮಾತನಾಡಿದರು. ವೀರೇಶ ಮಠಪತಿ, ಐ.ಎಂ. ಹಿರೇಗೌಡರ, ಪಿ.ಎಚ್.ಪಾಟೀಲ ಇತರರು ಇದ್ದರು.
Published on

ಯರಗಟ್ಟಿ: ಗಣೇಶ ಚತುರ್ಥಿಯನ್ನು ಸಂಭ್ರಮದಿಂದ, ಶಾಂತಿಯುತವಾಗಿ ಆಚರಿಸಬೇಕು ಎಂದು ಡಿವೆಎಸ್ಪಿ ರಾಮನಗೌಡ ಹಟ್ಟಿ ಹೇಳಿದರು. ಪಟ್ಟಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿ, ಗಣೇಶ ವಿಸರ್ಜನೆ ವೇಳೆಯಲ್ಲಿ ಡಿಜೆ ಹಚ್ಚುವುದಕ್ಕೆ ಸಂಪೂರ್ಣ ನಿಷೇಸಲಾಗಿದೆ. ಆದ್ದರಿಂದ ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ಮಜಲುಗಳ ಮೂಲಕ ಸಂಜೆ 4.10ರೊಳಗೆ ಗಣಪತಿ ಮೂರ್ತಿ ವಿಸರ್ಜನೆ ಮಾಡಬೇಕು ಎಂದರು. ಸಿಪಿಐ ವೀರೇಶ ಮಠಪತಿ ಮಾತನಾಡಿ, ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು ಎಂದರು. ಪಿಎಸ್‌ಐ ಐ.ಎಂ. ಹಿರೇಗೌಡರ, ಪಿ.ಎಚ್.ಪಾಟೀಲ, ಕುಮಾರ ಹಿರೇಮಠ, ವೆಂಕಟೇಶ ದೇವರಡ್ಡಿ, ಮಲಿಕಸಾಬ್ ಬಾಗವಾನ, ಸದಾನಂದ ಹಣಬರ, ಇಮಾಮಸಾಬ್ ಹುಸೇನಾಯ್ಕರ, ಭಾಸ್ಕರ್ ಹಿರೇಮೆತ್ರಿ, ಪ್ರಕಾಶ ವಾಲಿ, ಸಂತೋಷ ಚನ್ನಮೆತ್ರಿ ಇತರರು ಇದ್ದರು.

ಕಕ್ಕೇರಿ ವರದಿ: ಗ್ರಾಮಸ್ಥರು ಹಾಗೂ ಸಾರ್ವಜನಿಕ ಗಣೇಶ ಮಂಡಳಿಯವರು ಶಾಂತಿಯುತವಾಗಿ ಗಣೇಶ ಹಬ್ಬ ಆಚರಿಸಿ ಎಂದು ನಂದಗಡ ಠಾಣೆ ಪಿಐ ಎಸ್.ಸಿ.ಪಾಟೀಲ ಹೇಳಿದರು. ಸ್ಥಳೀಯ ಶ್ರೀ ಬಿಷ್ಟಾದೇವಿ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಾಂತಿಪಾಲನೆ ಸಭೆಯಲ್ಲಿ ಮಾತನಾಡಿದರು. ಪ್ರತಿ ಗ್ರಾಮದಲ್ಲಿ 5ರಿಂದ 10 ಸಾರ್ವಜನಿಕ ಗಜಾನನೋತ್ಸವ ಕಮಿಟಿ ಅವರು ಗಣೇಶ ಮೂರ್ತಿ ಪ್ರತಿಷ್ಠಾಪಿಸುವುದರಿಂದ ಪೊಲೀಸ್ ಸಿಬ್ಬಂದಿ ನಿಯೋಜನೆಗೆ ಕಷ್ಟವಾಗುತ್ತದೆ. ನಿಮಯ ಉಲ್ಲಂಘಿಸಿದರೆ ಕಾನೂನು ಕ್ರಮ ಕೆಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಪರಶುರಾಮ ಬಿರ್ಜಿ, ನಾಮದೇವ ಕುಂಬಾರಕೊಪ್ಪು, ಸಂಗಪ್ಪ ಮಾಟೊಳ್ಳಿ, ಅಲೆಗ್ಸಾಂಡರ್ ಡಿಸೋಜಾ, ಶಂಕರ ಕೊಳಕಿ, ರಮೇಶ ಕುಚೇರಿ, ನಾಗರಾಜ ಭಜಂತ್ರಿ, ಕಿಶೋರ ಮಿಠಾರಿ, ಕುಶಾಲ ಅಂಬೋಜಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net