

ತಲ್ಲೂರ: ಭಾವೈಕ್ಯದ ಸಂಕೇತವಾದ ಮೊಹರಂ ಹಬ್ಬವನ್ನು ಶಾಂತಿಯುತವಾಗಿ ಆಚರಣೆ ಮಾಡಬೇಕು ಎಂದು ಮುರಗೋಡ ಪೊಲೀಸ್ ಠಾಣೆ ಸಿಪಿಐ ಐ.ಎಂ.ಮಠಪತಿ ಹೇಳಿದರು.
ಸಮೀಪದ ಆಲದಕಟ್ಟಿ ಕೆ.ಎಂ. ಗ್ರಾಮದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಈಚೆಗೆ ಹಮ್ಮಿಕೊಂಡಿದ್ದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಹಿತರ ಘಟನೆ ನಡೆಯದಂತೆ ಮೊಹರಂ ಆಚರಿಸುವ ಮೂಲಕ ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು ಎಂದರು.
ಪಿಎಸ್‌ಐ ಐ.ಎಂ.ಹಿರೇಗೌಡರ ಮಾತನಾಡಿ, ಮೊಹರಂ ಆಚರಿಸುವಾಗ ಕಾನೂನು ಉಲ್ಲಂಸಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಮುಖಂಡ ಚನ್ನಬಸಪ್ಪ ಮುಗಳಿ, ಬಸವಂತಪ್ಪ ನಂಜನ್ನವರ, ರಾಯಪ್ಪ ರಾಯನ್ನವರ, ಬಸವರಾಜ ಯರಗಟ್ಟಿ, ಮಲ್ಲನಗೌಡ ಸಣ್ಣಗೌಡರ, ನಾಗಪ್ಪ ಗುರನಗೌಡರ, ಕೀರಪ್ಪ ಸವದತ್ತಿ, ಶಿವಪ್ಪ ನಂಜನ್ನವರ, ಗೌಡಪ್ಪ ಸಣ್ಣಗೌಡರ, ನಾಗಪ್ಪ ಚೌಡಪ್ಪನವರ, ಶ್ರೀಕಾಂತ ಹಿರೇಮಠ, ಕೀರಪ್ಪ ಗುರನಗೌಡರ, ಪ್ರಕಾಶ ಸಣ್ಣಗೌಡರ, ಬಸವರಾಜ ಡಮ್ಮಣಗಿ, ಗ್ರಾಪಂ ಸದಸ್ಯ ಅಶೋಕ ಚಿಕ್ಕೊಪ್ಪ, ಕೀರಪ್ಪ ಸಣ್ಣಗೌಡ್ರ ಇತರರು ಇದ್ದರು.