ಶಾಂತಿಯುತವಾಗಿ ಬಕ್ರೀದ್ ಆಚರಿಸಿ

HRP Bakrid
ಅರಸೀಕೆರೆ ಪೋಲೀಸ್ ಠಾಣೆಯಲ್ಲಿ ಬುಧವಾರ ಶಾಂತಿ ಸಭೆ ನಡೆಯಿತು. ಪಿಎಸ್‌ಐ ಕೆ.ರಂಗಯ್ಯ, ಅಪರಾಧ ವಿಭಾಗದ ಪಿಎಸ್‌ಐ ಭೀಮ್‌ದಾಸ್, ಗ್ರಾಪಂ ಅಧ್ಯಕ್ಷ ಎ.ಇನಾಯತ್ ಉಲ್ಲಾ, ಪ್ರಮುಖರಾದ ಅದಾಮ್ ಸಾಹೇಬ್, ಪೂಜಾರ್ ಮರಿಯಪ್ಪ ಇತರರಿದ್ದರು.
Published on

ಹರಪನಹಳ್ಳಿ: ಬಕ್ರೀದ್ ಹಬ್ಬವನ್ನು ಶಾಂತಿ ಸೌಹಾರ್ದಯುತವಾಗಿ ಆಚರಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದೆಂದು ಪಿಎಸ್‌ಐ ಕೆ. ರಂಗಯ್ಯ ತಿಳಿಸಿದರು.

ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಬುಧವಾರ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಅರಸೀಕೆರೆ ಠಾಣೆ ವ್ಯಾಪ್ತಿಗೆ ಹನುಮನಹಳ್ಳಿ, ಮಾದಿಹಳ್ಳಿ, ಉಚ್ಚಂಗಿದುರ್ಗ, ಯು.ಕಲ್ಲಹಳ್ಳಿ ಹಾಗೂ ರಾಮನಗರ ಗ್ರಾಮಗಳಲ್ಲಿ ಮುಸ್ಲಿಮರು ಶಾಂತಿಯುತವಾಗಿ ಹಬ್ಬ ಆಚರಿಸಬೇಕು. ಠಾಣೆಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷ ಎ.ಇನಾಯತ್ ಉಲ್ಲಾ, ಪ್ರಮುಖರಾದ ಅದಾಮ್ ಸಾಹೇಬ್, ಪೂಜಾರ್ ಮರಿಯಪ್ಪ, ಮತೀನ್ ಸಾಹೇಬ್, ಅಯೂಬ್ ಸಾಹೇಬ್, ರಹಮತ್ ಉಲ್ಲಾ, ಕೂಲಹಳ್ಳಿ ಕೊಟ್ರೇಶ್, ರೋಹಿತ್, ಮಂಜುನಾಥ, ರವಿನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net