ಗ್ರಾಪಂಗೆ ಶಾಂತಿಯುತ ಮತದಾನ

indi 25-4
ಇಂಡಿ ತಾಲೂಕಿನ ಭತಗುಣಕಿ ಗ್ರಾಪಂಗೆ ಎಸಿ ಅನುರಾಧಾ ವಸದ ಭೇಟಿ ನೀಡಿ ಮತದಾನ ವೀಕ್ಷಿಸಿದರು.
Published on

ಇಂಡಿ: ತಾಲೂಕಿನ ಲಚ್ಯಾಣ, ಭತಗುಣಕಿ ಗ್ರಾಮ ಪಂಚಾಯಿತಿ ಸದಸ್ಯರು ನಿಧನರಾಗಿದ್ದ ಪ್ರಯುಕ್ತ ತೆರವಾಗಿದ್ದ ಗ್ರಾಪಂ ಸದಸ್ಯ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆಯಿತು.

ಲಚ್ಯಾಣದಲ್ಲಿ ಶೇ. 64.95 ಮತ್ತು ಭತಗುಣಕಿಯಲ್ಲಿ ಶೇ 67.50 ರಷ್ಟು ಮತದಾನವಾಗಿದೆ.

ಲಚ್ಯಾಣದಲ್ಲಿ ಚನ್ನಮ್ಮ ಸಿದ್ದರಾಮ ಕೊತಲಿ, ಜಗದೇವಿ ಶಂಕರೆಪ್ಪ ಮುಜಗೊಂಡ ಮತ್ತು ಸುವರ್ಣಾ ಯಶವಂತ ಬಿರಾದಾರ ಸ್ಪರ್ಧಿಸಿದ್ದರು. ಈ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು.

ಭತಗುಣಕಿ ಗ್ರಾಪಂದಲ್ಲಿ ಯಲ್ಲವ್ವ ಮಾಳಪ್ಪ ವಾಘೆ, ರೇಖಾ ಶ್ರೀಮಂತ ಕಂಠಿಕರ, ಶಹಿರಾಬಾನು ಅಬ್ಬಾಸ್ ಭಾಗವಾನ ಸ್ಪರ್ಧಿಸಿದ್ದರು.

ಮುಕ್ತಾಬಾಯಿ ಬಸಣ್ಣ ಕಂಠಿಕರ ಮತ್ತು ಕಲಾವತಿ ಹಣಮಂತ ಬಿರಾದಾರ ಇವರ ನಿಧನದಿಂದ ಗ್ರಾಪಂ ಸ್ಥಾನ ತೆರವಾಗಿತ್ತು.

ಕಂದಾಯ ಉಪವಿಭಾಗಾಧಿಕಾರಿ ಅನುರಾಧಾ ವಸದ, ತಹಸೀಲ್ದಾರ್ ಬಿ.ಎಸ್. ಕಡಕಬಾವಿ ಮತ್ತು ಚುನಾವಣೆ ಉಸ್ತುವಾರಿ ಆರ್.ಬಿ ಮೂಗಿ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net