ಎನ್.ಆರ್.ಪುರದಲ್ಲಿ ಶಾಂತಿಯುತ ಮತದಾನ

3 nrp 1
ಎನ್.ಆರ್.ಪುರ ತಾಲೂಕು ಕಚೇರಿಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಲು ನಿಂತಿರುವ ಮತದಾರರು.
Published on

ಎನ್.ಆರ್.ಪುರ: ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯು ತಾಲೂಕು ಕಚೇರಿಯಲ್ಲಿ ಶಾಂತಿಯುತವಾಗಿ ನಡೆದಿದ್ದು , ಪದವೀಧರ ಕ್ಷೇತ್ರದಲ್ಲಿ ಶೇ.85.09 ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಶೇ.90.04 ರಷ್ಟು ಮತದಾನ ನಡೆದಿದೆ ಎಂದು ತಹಸೀಲ್ದಾರ್ ಎಂ.ಎಸ್.ರಮೇಶ್ ಹೇಳಿದರು.
ಪದವೀಧರ ಕ್ಷೇತ್ರದಲ್ಲಿ 235 ಪುರುಷ ಹಾಗೂ 272 ಮಹಿಳಾ ಮತದಾರರು ಸೇರಿ ಒಟ್ಟು 507 ಮತದಾರರಿದ್ದು, 207 ಪುರುಷ ಹಾಗೂ 224 ಮಹಿಳೆಯರು ಸೇರಿ ಒಟ್ಟು 431ಮತದಾರರು ಮತ ನೀಡಿದರು. ಶಿಕ್ಷಕರ ಕ್ಷೇತ್ರದಲ್ಲಿ 79 ಪುರುಷ 77 ಮಹಿಳಾ ಮತದಾರರು ಸೇರಿ 156 ಮತದಾರರಿದ್ದು, 74 ಪುರುಷ ಹಾಗೂ 67 ಮಹಿಳೆಯರು ಸೇರಿ ಒಟ್ಟು 141 ಶಿಕ್ಷಕರು ಮತ ಚಲಾಯಿಸಿದ್ದಾರೆ.
ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಮತದಾನ ಮುಗಿಯಲು ಕೆಲವೇ ನಿಮಿಷ ಇರುವಾಗ ಮಳೆ ಪ್ರಾರಂಭವಾಯಿತು. ತಾಲೂಕು ಕಚೇರಿಯ ಎರಡು ಮತಗಟ್ಟೆಯಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮತದಾನ ಕೇಂದ್ರದಿಂದ 100 ಮೀಟರ್ ಅಂತರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಪೊಲೀಸ್ ಬಿಗಿ ಬಂದೋ ಬಸ್ತು ಏರ್ಪಡಿಸಲಾಗಿತ್ತು. ಮತದಾನದ ನಂತರ ಮತಪೆಟ್ಟಿಗೆಗಳನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಗೆ ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ತಲುಪಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net