

ಕಂಪ್ಲಿ: ಗಣೇಶ ಉತ್ಸವವನ್ನು ಶಾಂತಿ ಮತ್ತು ಸುವ್ಯವಸ್ಥೆಯಿಂದ ಆಚರಿಸಬೇಕು ಎಂದು ಡಿಎಸ್ಪಿ ಪ್ರಸಾದ್ ಕೆ.ಗೋಖಲೆ ತಿಳಿಸಿದರು.
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಬುಧವಾರ ಸಂಜೆ ಪೊಲೀಸ್ ಮತ್ತು ಗೃಹರಕ್ಷಕ ದಳ ಸಿಬ್ಬಂದಿಯ ಪಥ ಸಂಚಲನಕ್ಕೆ ಚಾಲನೆ ನೀಡಿ ಮಾತನಾಡಿದರು. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಟ್ಟಣದ 60 ಸೇರಿ ಒಟ್ಟು 139 ಸಾರ್ವಜನಿಕ ಗಣಪತಿಗಳ ಸ್ಥಾಪನೆಗೆ ಅನುಮತಿ ನೀಡಿದೆ.
ಗೋನಾಳ್ ಗ್ರಾಮದಲ್ಲಿ ನಿಷೇಧಿಸಲಾಗಿದೆ. ಗಣೇಶ ಹಬ್ಬವನ್ನು ಸರ್ವರೂ ಶಾಂತಿಯಿಂದ ಆಚರಿಸಬೇಕು. ಪೊಲೀಸ್ ಠಾಣೆ ನೀಡಿದ ಸೂಚನೆಗಳನ್ನು ಅನುಸರಿಸಬೇಕು ಎಂದರು. ಪಿಐ ಕೆ.ಬಿ.ವಾಸುಕುಮಾರ್ ಇತರರಿದ್ದರು.