

ಕಡೂರು: ಪಟ್ಟಣದ ಅಂಬೇಡ್ಕರ್ ವೃತ್ತದ ಸಮೀಪ ಪ್ರತಿಷ್ಟಾಪಿಸಿದ್ದ ಹಿಂದು ಮಹಾಗಣಪತಿ ಮೂರ್ತಿಯನ್ನು ಶನಿವಾರ ಅದ್ಧೂರಿ ಮೆರವಣಿಗೆಯೊಂದಿಗೆ ಕೆ.ಹೊಸಳ್ಳಿಯ ಕಲ್ಯಾಣಿಯಲ್ಲಿ ವಿಸರ್ಜಿಸಲಾಯಿತು.
ಸಂಜೆ 5 ಗಂಟೆ ವೇಳೆಗೆ ಪೊಲೀಸ್ ಬಂದೋ ಬಸ್ತ್‌ನಲ್ಲಿ ಆರಂಭವಾದ ವಿಸರ್ಜನಾ ಮಹೋತ್ಸವದ ಮೆರವಣಿಗೆ ಪಟ್ಟಣದ ಕೆಎಲ್‌ವಿ ವೃತ್ತ, ಗಣಪತಿ ಆಂಜನೇಯಸ್ವಾಮಿ ರಸ್ತೆ, ಜೈನ್ ಟೆಂಪಲ್‌ರಸ್ತೆ, ಕದಂಬ ವೃತ್ತದ ಮೂಲಕ ರೈಲ್ವೆಗೇಟ್‌ನಿಂದ ಕೆ.ಎಂ ರಸ್ತೆಯಿಂದ ಹೊಸಳ್ಳಿಯ ಕಲ್ಯಾಣಿಯವರೆಗೆ ನಡೆಯಿತು.
ಮೆರವಣಿಗೆಯಲ್ಲಿ ಯುವಕರು ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ಸಿಡಿಮದ್ದುಗಳ ಪ್ರದರ್ಶನ ನಡೆಯಿತು. ಯುವಕರು ಗಣೇಶನಿಗೆ ಜೈಕಾರ ಹಾಕುವ ಮೂಲಕ ಶ್ರೀರಾಮನ ಸ್ಮರಣೆಯೊಂದಿಗೆ ಘೋಷಣೆಗಳು ಮೊಳಗಿದವು. ಶಾಂತ ರೀತಿಯಲ್ಲಿ ವಿಸರ್ಜನಾ ಮಹೋತ್ಸವ ಸಂಪನ್ನಗೊಂಡಿತು.
ಸಿಪಿಐ ಶಿವಕುಮಾರ್ ಹಾಗೂ ಪಿಎಸೈ ಧನಂಜಯ್, ಸಮಿತಿ ಮುಖಂಡರಾದ ಕೆ.ಬಿ.ಸೋಮೇಶ್, ಕೆ.ಜಿ.ಲೋಕೇಶ್ವರ್, ಮಂಜುನಾಥ್ ಜೈನ್, ಕರವೇ ಸಿದ್ದಪ್ಪ, ಚೇತನ್, ಅಭಿಷೇಕ ಬಿಂಗಾ, ಪೃಥ್ವಿದೇವರಾಜ್, ಮನು, ನವೀನ್ ಅರಸ್, ಗುರುಸೋಮೇಶ್, ದರ್ಶನ, ಗಿರೀಶ, ಕೆ.ಎಲ್. ಸೋಮೇಶ, ಆಸ್ತಿಕ, ಯಶ್ವಂತ್, ವಿನಯ್ , ಆಕಾಶ್ ಕೊಠಾರಿ ಮತ್ತಿತರಿದ್ದರು.