ಶಾಂತಿ, ನೆಮ್ಮದಿಯಿಂದ ಉತ್ತಮ ಆರೋಗ್ಯ

31 TKE 2,2
ತರೀಕೆರೆಯಲ್ಲಿ ಆಯೋಜಿಸಿದ್ದ ಜನನಿ ಸಾಸ್ಥ್ಯ ಕಾರ್ಯಕ್ರಮವನ್ನು ಆಡಳಿತ ವೈದ್ಯಾಧಿಕಾರಿ ಡಾ.ಗೌತಮ್ ಉದ್ಘಾಟಿಸಿದರು. ಡಾ.ಬಿ.ವಿ.ಕಿಶೋರ್‌ಕುಮಾರ್, ಜಿ.ಸಿ.ರಾಕೇಶ್, ಮಂಜುಳಾ, ಉಮಾದೇವಿ, ಡಾ.ಅಂಜನಾ ಆಚಾರ್ಯ ಇತರರಿದ್ದರು.
Published on

ತರೀಕೆರೆ: ಆಧುನಿಕತೆಗೆ ಮಾರುಹೋಗಿ ಜೀವನ ಶೈಲಿ ಬದಲಾವಣೆ ಮಾಡಿಕೊಳ್ಳುತ್ತಿರುವುದರಿಂದ ಮಹಿಳೆಯರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಪ್ರಸೂತಿ ಮತ್ತು ಸೀ ರೋಗ ತಜ್ಞೆ ಡಾ.ಕಾವ್ಯಶ್ರೀ ಹೇಳಿದರು.
ಪಟ್ಟಣದ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ತಾಲೂಕು ಪಂಚಾಯಿತಿ, ಪುರಸಭೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಆಯುಷ್ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ಜನನಿ ಸಾಸ್ಥ್ಯ ಕಾರ್ಯಕ್ರಮದಲ್ಲಿ ಋತುಚಕ್ರದ ಸಮಸ್ಯೆಗಳು, ಚಿಕಿತ್ಸೆ ಮತ್ತು ಮಹಿಳೆಯರ ಜೀವನ ಶೈಲಿ ವಿಷಯ ಕುರಿತು ಮಾಹಿತಿ ನೀಡಿದರು.
ದೈನಂದಿನ ಒತ್ತಡಗಳಿಂದ ಮಧುಮೇಹ, ಗರ್ಭಾಶಯದಲ್ಲಿ ನೀರು ಗುಳ್ಳೆಗಳು, ರಕ್ತದೊತ್ತಡ, ಬಂಜೆತನಗಳಂಥ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿದ್ದೇವೆ. ಶಾಂತಿ, ನೆಮ್ಮದಿಗೆ ಆದ್ಯತೆ ನೀಡಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಸರ್ಕಾರಿ ಆಯುರ್ವೇದ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಗೌತಮ್, ತಜ್ಞ ವೈದ್ಯ ಡಾ.ಬಿ.ವಿ.ಕಿಶೋರ್‌ಕುಮಾರ್, ರೋಟರಿ ಕ್ಲಬ್ ಅಧ್ಯಕ್ಷ ಜಿ.ಸಿ.ರಾಕೇಶ್, ಮಮತಾ ಮಹಿಳಾ ಸಮಾಜದ ಅಧ್ಯಕ್ಷೆ ಮಂಜುಳಾ, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಉಮಾದೇವಿ, ಕಾರ್ಯದರ್ಶಿ ಸುನಿತಾ, ಸದಸ್ಯೆ ಡಾ.ಅಂಜನಾ ಆಚಾರ್ಯ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net