ದೇವರ ಸಾನ್ನಿಧ್ಯದಿಂದ ಮನಸ್ಸಿಗೆ ನೆಮ್ಮದಿ

29 ಎಸ್ಕೆಪಿ 2 ಬಳ್ಳಿಗಾವೆ ಜಾತ್ರೆ
ಸಂಸದ ಬಿ.ವೈ.ರಾಘವೇಂದ್ರ ಅವರು ಬಳ್ಳಿಗಾವೆ ಶ್ರೀ ಕೇದಾರೇಶ್ವರ ಸ್ವಾಮಿಯ ದರ್ಶನ ಪಡೆದರು. ಅಗಡಿ ಅಶೋಕ್, ಚನ್ನವೀರ ಶೆಟ್ಟಿ ಇತರರಿದ್ದರು.
Published on

ಶಿಕಾರಿಪುರ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಶುಕ್ರವಾರ ರಾತ್ರಿ ತಾಲೂಕಿನ ಬಳ್ಳಿಗಾವೆಯ ಶ್ರೀ ಕೇದಾರೇಶ್ವರ ಜಾತ್ರೆಯಲ್ಲಿ ಪಾಲ್ಗೊಂಡು, ಸ್ವಾಮಿಯ ದರ್ಶನಾಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೈವ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ, ದೇವರ ಸನ್ನಿಧಾನದಲ್ಲಿದ್ದಾಗ ಒತ್ತಡಗಳಿಂದ ದೂರವಾಗಿ ಮನಸ್ಸು ಹಗುರವಾಗುತ್ತದೆ. ಜಾತ್ರೆ, ಉತ್ಸವ, ಹಬ್ಬ-ಹರಿದಿನಗಳು ಧರ್ಮಜಾಗೃತಿ ಮೂಡಿಸುತ್ತವೆ. ಬಳ್ಳಿಗಾವೆಯು ಶಾಸನಗಳ ತವರು. ಭಗವಂತನ ಅನುಗ್ರಹ ನಮಗೆ ಬಹಳ ಮುಖ್ಯ. ಅವನ ಅನುಗ್ರಹವಿಲ್ಲದೆ ಹುಲ್ಲುಕಡ್ಡಿಯೂ ಚಲಿಸದು. ಶ್ರೀ ಕೇದಾರೇಶ್ವರ ಸ್ವಾಮಿಯ ದರ್ಶನ ಪಡೆದು ನನಗೆ ಅತ್ಯಂತ ಸಂತಸವಾಗಿದೆ ಎಂದರು.
ಭಾರತ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಜಾಗತಿಕ ಮಟ್ಟದಲ್ಲಿ ವಿಶ್ವಮಾನ್ಯವಾಗಿದೆ. ಮೋದಿ ಅವರು ವಿಶ್ವಶ್ರೇಷ್ಠ ಜನನಾಯಕರಾಗಿ ಹೊರಹೊಮ್ಮಿದ್ದಾರೆ. ಇಡೀ ಜಗತ್ತು ಭಾರತದ ಮುನ್ನಡೆಯನ್ನು ಬೆರಗುಗಣ್ಣಿನಿಂದ ನೋಡುತ್ತಿದೆ. ಮೋದಿ ಒಬ್ಬ ವ್ಯಕ್ತಿಯಾಗಿ ಎಂದಿಗೂ ಕಾಣಲಿಲ್ಲ. ಅವರೊಬ್ಬ ಅದ್ಭುತ ಶಕ್ತಿಯಾಗಿ ಕಂಗೊಳಿಸುತ್ತಿದ್ದಾರೆ. ಭಾರತೀಯರು ದೇಶದ ಸಮಗ್ರತೆ ಮತ್ತು ಅಖಂಡತೆ ದೃಷ್ಟಿಯಿಂದ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕೆಂದು ಬಯಸಿದ್ದಾರೆ ಎಂದು ತಿಳಿಸಿದರು.
ಸಹಕಾರಿ ಧುರೀಣ ಅಗಡಿ ಅಶೋಕ್, ಚನ್ನವೀರ ಶೆಟ್ಟಿ, ದೇವಾಲಯ ಸಮಿತಿ ಪದಾಧಿಕಾರಿಗಳು, ಭಕ್ತರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net