

ರಾಯಲ್ಪಾಡು: ರಾಮ ನಾಮದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಧಾರ್ಮಿಕ ಪ್ರವಚನಕಾರ ವೆಲ್ಲಾಲ ಸತ್ಯನಾರಾಯಣಶಾಸ್ತ್ರಿ ತಿಳಿಸಿದರು.
ರಾಯಲ್ಪಾಡು ಸಮೀಪದ ಕದಿರಂಪಲ್ಲಿ ಗ್ರಾಮದಲ್ಲಿ ಲೋಕಕಲ್ಯಾಣಾರ್ಥವಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಶ್ರೀ ಸೀತಾರಾಮಲಕ್ಷ$್ಮಣ, ಆಂಜನೇಯ ಸ್ವಾಮಿಯ ನೂತನ ಬಿಂಬ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯನು ದಿನನತ್ಯದ ಜಂಜಾಟಗಳಲ್ಲಿ ತೊಡಗಿರುತ್ತಾನೆ. ಅವನಿಗೆ ಮಾನಸಿಕವಾಗಿ ಒಂದಿಲ್ಲದೊಂದು ಸಮಸ್ಯೆಗಳು ಇದ್ದೇ ಇರುತ್ತದೆ. ಎಷ್ಟೇ ಮಾನಸಿಕ ಒತ್ತಡಗಳು ಇದ್ದರೂ ಸಹ ದೇವಾಲಯಗಳಿಗೆ ಬಂದು ಹೋದರೆ ಮನಸ್ಸು ಸಂತಸಗೊಳ್ಳುತ್ತದೆ. ಎಷ್ಟೇ ಹಣ ಸಂಪಾದನೆ ಮಾಡಿದರು ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ದೊರೆಯುತ್ತಿಲ್ಲ .ಇಂತಹ ದಿನಗಳಲ್ಲಿ ದೇವರ ಆರಾಧನೆಯ ಅಗತ್ಯತೆ ಹೆಚ್ಚಾಗಿದೆ ಎಂದರು.
ನಮಗೆ ಜ್ಞಾನ ಮತ್ತು ಸಮೃದ್ಧಿ ನೀಡುವ ನಡುವಳಿಕೆಯೇ ಧರ್ಮ. ಇತ್ತೀಚಿನ ದಿನಗಳಲ್ಲಿ ಮಾನವನು ಭೋಗ ಜೀವನವೇ ಮುಖ್ಯ ಎಂಬುದರಲ್ಲಿ ಕಾಲ ಕಳೆಯುತ್ತಿದು, ಇದರಿಂದಾಗಿ ಪರಿಸರದಲ್ಲಿ ವೈಪರೀತ್ಯಗಳಾಗಿ ಮನವನ ಮನಸ್ಸು ಏಕಾಗ್ರತೆ ಇಲ್ಲದೆ, ಚಂಚಲ ಸ್ವಭಾವಿಯಾಗಿ ಆನೇಕ ಕೆಟ್ಟ ಹವ್ಯಾಸಿಗಳಿಗೆ ಬಲಿಯಾಗುತ್ತಿದ್ದೇನೆ ಎಂದು ವಿಷಾದ ವ್ಯಕ್ತಪಡಿಸಿದರು.
ಆಗಮಿಕರಾದ ಗುಡಿಪಲ್ಲಿ ಡಿ.ಆರ್. ಮಂಜುನಾಥಶಾಸ್ತ್ರಿ, ಚಿಕ್ಕಬಳ್ಳಾಪುರ ಘನಪಾಠಿ ಮಂಜುನಾಥಶರ್ಮ, ನಂಗಲಿ ಅರುಣ್ ಕುಮಾರ್, ಗುಡಿಪಲ್ಲಿ ಕಿರಣ್ಕುಮಾರ್, ಅರ್ಚಕ ಕೂರಿಗೇಪಲ್ಲಿ ಸುಬ್ಬರಾವ್ ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕದರಿಂಪಲ್ಲಿ ಗ್ರಾಮಸ್ಥರಾದ ಕೆ.ರಘುನಾಥರೆಡ್ಡಿ, ಜಿ.ಬಿ.ಶ್ರೀನಿವಾಸರೆಡ್ಡಿ , ರಮೇಶ್, ಶಶಿ, ನರಸಿಂಹರೆಡ್ಡಿ ಇದ್ದರು.