

ನರಗುಂದ: ಇಂದಿನ ಆಧುನಿಕ ಭರಾಟೆಯಲ್ಲಿ ಧರ್ಮದ ಹಾದಿಯನ್ನೇ ಮರೆಯುತ್ತಿದ್ದೇವೆ. ಪುರಾಣ ಪ್ರವಚನಗಳಿಂದ ಮನಸು ನೆಮ್ಮದಿಯಾಗಿರಲಿದೆ. ಭಕ್ತರು ಧರ್ಮ ಮಾರ್ಗದಲ್ಲಿ ನಡೆದರೆ ಜೀವನ ಸಾರ್ಥಕವಾಗುತ್ತದೆ ಎಂದು ಕೊತಬಾಳ ಅಡವಿ ಸಿದ್ಧೇಶ್ವರಮಠದ ಗಂಗಾಧರ ಸ್ವಾಮಿಗಳು ಹೇಳಿದರು.
ಪಟ್ಟಣದ ಕಸಬಾ ಬಡಾವಣೆಯ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಧರ್ಮ ಸಭೆಯಲ್ಲಿ ಅವರು ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಯಾವಗಲ್ ಮಾತನಾಡಿ, ಮನುಷ್ಯ ಜೀವನ ಸಾರ್ಥಕವಾಗಬೇಕಾದರೆ ಸಮಾಜದ ಪ್ರತಿಯೊಬ್ಬರೂ ಧರ್ಮದ ಹಾದಿಯಲ್ಲಿ ನಡೆಯಬೇಕು ಎಂದರು.
ಇದಕ್ಕೂ ಮುನ್ನ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ವೀರಭದ್ರೇಶ್ವರ ಮೂರ್ತಿಗೆ ಮಹಾ ರುದ್ರಾಭಿಷೇಕ, ನವಗ್ರಹ ಪೂಜೆ, ಶಾಂತಿ ಹೋಮ ಹಾಗೂ ವಿವಿಧ ಧಾರ್ವಿುಕ ಕಾರ್ಯಕ್ರಮ ನೆರವೇರಿಸಲಾಯಿತು. ಶಿವಮೊಗ್ಗ ಜಿಲ್ಲೆಯ ನ್ಯಾಮತಿ ತಾಲೂಕಿನ ಕುಂಕುಮ ಗ್ರಾಮದ ಎ.ಸಿ. ಮಹೇಶ್ವರಪ್ಪ ಸಂಗಡಿಗರಿಂದ ಗುಗ್ಗಳ ಪುರವಂತಿಕೆ, ವೀರಗಾಸೆ ಕಾರ್ಯಕ್ರಮ ಜರುಗಿದವು.
ಮಹೇಶಗೌಡ ಪಾಟೀಲ ಮಾತನಾಡಿದರು. ಕಪಿಲೇಶ್ವರ ಶಾಸ್ತ್ರಿಗಳು, ಸುಭಾಷಚಂದ್ರ ಹಳಕಟ್ಟಿ, ಕರಬಸಪ್ಪ ನಾಗಠಾಣ ಮಾತನಾಡಿದರು. ಮಲ್ಲಪ್ಪ ಪಿಡ್ನಾಯ್ಕರ್, ಶಂಕ್ರಪ್ಪ ನಾಗಠಾಣ, ಶಂಕ್ರಪ್ಪ ವಾಳದ, ಸಂತೋಷ ಆನೇಗುಂದಿ, ವಿರೇಶ ನಾಗಠಾಣ, ವೀರಣ್ಣ ವಡ್ಡಿಗೇರಿ, ಭೀಮನಗೌಡ ಕೊಪ್ಪನಗೌಡ್ರ, ವೀರಪ್ಪ ಸುನ್ನಾಳ, ನಾಗನಗೌಡ ಚನಬಸನಗೌಡ್ರ, ಪ್ರಭು ಲೆಂಗೆ, ಅಬ್ಬಿಗೇರಿ ಶಂಭುಲಿಂಗ ಶಾಸ್ತ್ರೀಗಳು, ಚಂದ್ರಶೇಖರ ರಬಕವಿ, ಇತರರು ಉಪಸ್ಥಿತರಿದ್ದರು. ಶಿವಯೋಗಿ ಹೆಗಡಾಳ ಕಾರ್ಯಕ್ರಮ ನಿರ್ವಹಿಸಿದರು.