

ಅಳವಂಡಿ: ಧರ್ಮನಿಷ್ಠೆ, ಧಾರ್ಮಿಕ ಭಾವನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮನುಷ್ಯ ಇನ್ನೊಬ್ಬರಿಗೆ ಒಳಿತಾಗುವಂತಹ ಜೀವನ ನಡೆಸಬೇಕು ಎಂದು ಹೂವಿನ ಹಡಗಲಿಯ ಶ್ರೀ ಹಿರೇಶಾಂತವೀರ ಸ್ವಾಮೀಜಿ ತಿಳಿಸಿದರು.
ಸಮೀಪದ ನಿಲೋಗಿಪುರ ಗ್ರಾಮದಲ್ಲಿ ನಿರ್ಮಿಸಿದ ಶ್ರೀ ಮಳೆಮಲ್ಲೇಶ್ವರ ದೇವಸ್ಥಾನವನ್ನು ಬುಧವಾರ ಉದ್ಘಾಟಿಸಿ ಮಾತನಾಡಿ, ಜೀವನದಲ್ಲಿ ಬರುವ ಕಷ್ಟಗಳನ್ನು ನಾವು ಅನುಭವಿಸಬೇಕು. ಅವುಗಳನ್ನು ಮೆಟ್ಟಿ ನಿಂತು ಸಾಧನೆ ಮಾಡಬೇಕು. ಆಗ ಮಾತ್ರ ಜನ ನಿಮ್ಮನ್ನು ಗುರುತಿಸುತ್ತಾರೆ. ಸಾಮಾಜಿಕ, ಧಾರ್ಮಿಕ ಕಾರ್ಯದಿಂದ ಮನಶಾಂತಿ ದೊರೆಯಲಿದೆ ಎಂದರು.
ಅಳವಂಡಿ ಶ್ರೀಸಿದ್ದೇಶ್ವರ ಮಠದ ಹಡಗಲಿಯ ಶ್ರೀ ಹಿರೇಶಾಂತವೀರ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಿ. ದುಷ್ಟ ವಿಚಾರಗಳು ಬದುಕನ್ನು ಹಾಳು ಮಾಡುತ್ತವೆ. ಹಣದಿಂದ ಮನೆ, ಜಮೀನು ಇತರ ಆಸ್ತಿಗಳನ್ನು ಖರಿದಿಸಬಹುದು. ಆದರೆ, ಶಾಂತಿ, ಆರೋಗ್ಯ, ಸಮಾಧಾನ, ಸಂಸ್ಕಾರಗಳನ್ನು ಖರಿದಿಸಲಾಗದು. ಕಾರಣ ಹಣವಿದ್ದಾಗಲೂ ಸಂಸ್ಕಾರಯುತ ಜೀವನ ನಡೆಸುವಂತೆ ಸಲಹೆ ನೀಡಿದರು.
ಪ್ರಮುಖರಾದ ಚರಂತಯ್ಯ ಹಿರೇಮಠ, ಯಲ್ಲಪ್ಪ ಮುಕ್ಕಣ್ಣವರ, ಪರಮೇಶ್ವರಯ್ಯ ಶಶಿ, ಶಿವಪ್ಪ ಮುಕ್ಕಣ್ಣವರ, ಪರಮೇಶ ಬಿಸನಳ್ಳಿ, ಮಲ್ಲಪ್ಪ ಎಲಿಗಾರ, ಶಂಕರ ಬಡಿಗೇರ, ವಿರುಪಣ್ಣ ಮುಕ್ಕಣ್ಣವರ, ಪರಶುರಾಮ ನಿಂಗಾಪುರ, ಅಶೋಕ ಶ್ಯಾವಣ್ಣವರ, ಹನುಮೇಶ ಬಾಲಣ್ಣವರ ಇತರರಿದ್ದರು.