

ಉಗರಗೋಳ: ಆಧುನಿಕತೆಯಿಂದ ಸಂಗೀತ ಕಲೆ ನಶಿಸಿಹೋಗುತ್ತಿದ್ದು, ಯುವಪೀಳಿಗೆ ಆಟಪಾಠದ ಜತೆಗೆ ಸಂಗೀತವನ್ನೂ ಕಲಿಯಬೇಕು ಎಂದು ಯುವ ಮುಖಂಡ ಅಶ್ವತ್ಥ ವೈದ್ಯ ಹೇಳಿದರು.
ಸಮೀಪದ ಚಿಕ್ಕುಂಬಿ ಗ್ರಾಮದಲ್ಲಿ ಜಗದ್ಗುರು ಅಜಾತ ನಾಗಲಿಂಗ ಸ್ವಾಮೀಜಿಯ 143ನೇ ಪುಣ್ಯಾರಾಧನೆ ನಿಮಿತ್ತ ಗ್ರಾಮದ ಸಂಗೊಳ್ಳಿ ರಾಯಣ್ಣ ಯುವಕ ಮಂಡಳ ಸಂಯುಕ್ತ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಬ್ಬರೂ ಒತ್ತಡದ ಬದುಕು ಸಾಗಿಸುತ್ತಿದ್ದಾರೆ. ಅದರಿಂದ ಹೊರಬಂದು ನೆಮ್ಮದಿಗಾಗಿ ಸಂಗೀತದತ್ತ ಒಲವು ಬೆಳೆಸಿಕೊಳ್ಳಬೇಕು ಎಂದರು.
ಅಭಿನವ ನಾಗಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸುರೇಶಗೌಡ ಬಡಗಿಗೌಡ್ರ, ಮಹಾಂತೇಶ ಸಂಗ್ರೇಶಿ, ಯಲ್ಲವ್ವ ಉಪ್ಪಾರ, ಡಿ.ಡಿ. ಟೋಪೋಜಿ, ಮಲ್ಲು ಜಕಾತಿ, ಪಿ.ವೈ. ಗಾಜಿ, ಗಿರೀಶ ಭೀಮರಡ್ಡಿ, ಸಂತೋಷ ನೊರೆಯವರ, ಈಶ್ವರ ಮೇಟಿ, ಮಹಾಂತೇಶ ಸಂಗ್ರೇಶ, ಗಂಗಪ್ಪ ಶಿರಸಂಗಿ, ಪುಂಡಲೀಕ ಸಂಗ್ರೇಶ, ಮಹಾದೇವಪ್ಪ ಸಿದ್ಧಾಪುರ, ರಂಗನಾಥ ಸಂಗ್ರೇಶ, ಪುಂಡಲೀಕ ಕುರಿ, ಮಹ್ಮದ್‌ಅಲಿ ದೊಡಮನಿ, ಬಾಳಪ್ಪ ಗೋವಣ್ಣವರ ಇತರರಿದ್ದರು.