ಸೌಹಾರ್ದಯುತವಾಗಿ ಹಬ್ಬ ಆಚರಿಸಿ

mkg1a
Published on

ನ್ಯಾಮತಿ: ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬವನ್ನು ಎಲ್ಲರೂ ಸೌಹಾರ್ದಯುತವಾಗಿ ಆಚರಣೆ ಮಾಡೋಣ ಎಂದು ತಹಸೀಲ್ದಾರ್‌ಎಚ್.ಬಿ. ಗೋವಿಂದಪ್ಪ ಹೇಳಿದರು.

ಪಟ್ಟಣದ ಬನಶಂಕರಿ ದೇಗುಲದ ಸಭಾ ಭವನದಲ್ಲಿ ಗುರುವಾರ ಆಯೋಜಿಸಿದ್ದ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬದ ಶಾಂತಿ ಪಾಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಶಾಂತಿ, ಸಾಮರಸ್ಯ ಇರಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯಿಂದ ನೀಡಲಾಗುವ ಸೂಚನೆಗಳನ್ನು ನಿರ್ಬಂಧ ಎಂದುಕೊಳ್ಳದೆ ಪಾಲಿಸುವ ಮೂಲಕ ಕಾನೂನನ್ನು ಗೌರವಿಸಬೇಕು. ಇಲಾಖೆಯು ಸಹ ಎಲ್ಲರಿಗೂ ಸಹಕಾರ ನೀಡಲಿದೆ ಎಂದರು.

ನ್ಯಾಮತಿ ಠಾಣೆ ಪಿಐ ಎನ್.ಡಿ. ರವಿ ಮಾತನಾಡಿ, ಹೈಕೋರ್ಟ್ ಆದೇಶದಂತೆ ಡಿಜೆಗೆ ಅವಕಾಶವಿಲ್ಲ. ಹಬ್ಬದ ಆಚರಣೆಗಳಲ್ಲಿ ಪ್ರಚೋದನಕಾರಿ ಹೇಳಿಕೆ, ಅಸಭ್ಯ ವರ್ತನೆ ಕಂಡುಬಂದರೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಬೆಸ್ಕಾಂ ಎಎಇ ಬಿ.ಕೆ. ಶ್ರೀನಿವಾಸ್, ಪಪಂ ಮುಖ್ಯಾಧಿಕಾರಿ ಪಿ. ಗಣೇಶ್‌ರಾವ್, ಪಿಎಸ್‌ಐ ಜಯಪ್ಪ ನಾಯ್ಕ, ಹೊನ್ನಾಳಿ ಅಗ್ನಿಶಾಮಕ ಠಾಣಾಧಿಕಾರಿ ಟಿ.ಆರ್. ಪರಶುರಾಮ್, ಹೊಸಮನೆ ಮಲ್ಲಿಕಾರ್ಜುನಪ್ಪ ಕುಂಬಾರ, ಶಂಕರ ನಾಯ್ಕ, ಚಟ್ನಹಳ್ಳಿ ಅಣ್ಣಪ್ಪ, ಯೂನಸ್ ಪಾಶಾ, ಮಹ್ಮದ್ ಅಸ್ಮಾಂ ಮಾತನಾಡಿದರು.

ತಾಪಂ ಅಧಿಕಾರಿ ರಾಜಶೇಖರ್, ಮಂಜುನಾಥ ಹೊನ್ನಾಳಿ, ಎಚ್.ವೈ. ಚಂದ್ರಶೇಖರ್, ಕರಿಬಸಪ್ಪ ತಳವಾರ, ಹೊನ್ನಾಳಿ ಅಗ್ನಿಶಾಮಕದ ಕೆ.ವಿ. ನಿರಂಜನ, ಮುಖಂಡರಾದ ಗುಂಡೂರು ಲೋಕೇಶ್, ಷಣ್ಮುಖ ವಾಲ್ಮಿಕಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net