ಪ್ರೀತಿ, ಬಾಂಧವ್ಯದಿಂದ ನೆಮ್ಮದಿ ಸಾಧ್ಯ

ಪ್ರೀತಿ, ಬಾಂಧವ್ಯದಿಂದ ನೆಮ್ಮದಿ ಸಾಧ್ಯ
Published on

ಕೆ.ಆರ್.ನಗರ: ಮನುಷ್ಯನಿಗೆ ಆಸೆ ಇರಬೇಕು-ದುರಾಸೆಗಳು ಇರಬಾರದು. ದುರಾಸೆಗಳಿದ್ದವನಿಗೆ ನೆಮ್ಮದಿ ಇರುವುದಿಲ್ಲ. ಪ್ರೀತಿ, ಬಾಂಧವ್ಯಗಳಿಂದ ನೆಮ್ಮದಿ ಸಾಧ್ಯ ಎಂದು ಗಾವಡಗೆರೆ ಗುರುಲಿಂಗ ಜಂಗಮ ಮಠದ ಶ್ರೀ ನಟರಾಜ ಸ್ವಾಮಿಗಳು ಹೇಳಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಿಂದ ಪಟ್ಟಣದ ಹುಣಸೂರು ರಸ್ತೆಯ ಪಕ್ಕದಲ್ಲಿರುವ 2ನೇ ಹಂತದ ಬಡಾವಣೆಯಲ್ಲಿ ಸಾರಿಗೆ ನೌಕರರಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿ, ಎಲ್ಲರೂ ಒಂದೇ ಭಾವನೆಯಿಂದ ಬದುಕಬೇಕು ಎಂದು ಕರೆ ನೀಡಿದರು.
ಎಲ್ಲರ ಸಹಕಾರದಿಂದ ಸಹಕಾರ ಸಂಘಗಳು ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ. ಸದಸ್ಯರಲ್ಲಿ ಸಂಬಂಧಗಳು ಬೆಳೆದಲ್ಲಿ ಸಹಕಾರ ಸಂಘಗಳು ಅಭಿವೃದ್ದಿಯತ್ತ ಸಾಗುತ್ತದೆ ಎಂದರು.

ಸಂಘದ ಅಧ್ಯಕ್ಷ ಕೆ.ಎಚ್.ಸ್ವಾಮಿ ಮಾತನಾಡಿ, ಸದಸ್ಯರೆಲ್ಲರ ಸಹಕಾರದಿಂದ 2ನೇ ಹಂತದ ಬಡಾವಣೆಯನ್ನು ಅಭಿವೃದ್ದಿ ಪಡಿಸಲು ಸಾಧ್ಯವಾಗಿದೆ ಎಂದರು.

ಕೆಎಸ್‌ಆರ್‌ಟಿಸಿ ಹಿರಿಯ ವಿಭಾಗ ನಿಯಂತ್ರಣಾಧಿಕಾರಿ ಬಿ.ಶ್ರೀನಿವಾಸ್, ವಿಭಾಗೀಯ ನಿಯಂತ್ರಣಾಧಿಕಾರಿ ಆರ್.ಆಶೋಕ್‌ಕುಮಾರ್, ಘಟಕ ವ್ಯವಸ್ಥಾಪಕ ಮಹೇಶ್, ಸಂಘದ ಉಪಾಧ್ಯಕ್ಷ ಅಣ್ಣೇಗೌಡ, ನಿರ್ದೇಶಕ ಜಿ.ಎನ್.ಲೋಕೇಶ್, ಕಲ್ಲೇಶ್, ಎಂ.ಎನ್.ಮಧುರಾ, ಎ.ಎನ್.ಅರುಣ, ಪಿ.ಎ.ಪುಟ್ಟರಾಜು, ಚಿದನಂದ, ಪ್ರಸನ್ನಕುಮಾರ್, ರಾಜಶೇಖರಮೂರ್ತಿ, ಸಿಬ್ಬಂದಿ ಮೇಘನಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net