ಸಂಗೀತ ಆಳಿಸುವುದರಿಂದ ನೆಮ್ಮದಿ ಸಾಧ್ಯ

Untitled design (1)
ಕವಿತಾಳ ಸಮೀಪದ ವಟಗಲ್‌ಬಸವೇಶ್ವರ ದೇವಸ್ಥಾನದಲ್ಲಿ ಸಪ್ತ ಭಜನೆ ಮಂಗಲ ಕಾರ್ಯಕ್ರಮದಲ್ಲಿ ಕಲ್ಮಠದ ಪೀಠಾಧಿಪತಿ ಸಿದ್ದಲಿಂಗ ಸ್ವಾಮೀಜಿ ಗುರುವಾರ ಮಾತನಾಡಿದರು. ಕಮೀಟಿಯ ಅಧ್ಯಕ್ಷ ಮಲ್ಲಿಕಾರ್ಜುನ ಕಡಬೂರ, ಪ್ರಮುಖರಾದ ಕನ್ನಾಳ ಬಸವರಾಜ, ಶೋಭಾ ಇದ್ದರು.
Published on

ಕವಿತಾಳ: ಸಪ್ತ ಭಜನೆ ಮೂಲಕ ದೇವರಿಗೆ ಭಕ್ತಿ ಸಮರ್ಪಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಕಲ್ಮಠದ ಪೀಠಾಧಿಪತಿ ಸಿದ್ದಲಿಂಗ ಸ್ವಾಮೀಜಿ ಹೇಳಿದರು.


ಸಮೀಪದ ವಟಗಲ್ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಸಪ್ತ ಭಜನೆ ಮಂಗಲ ಹಾಗೂ ರಥದ ಮನೆ ಉದ್ಘಾಟಿಸಿ ಗುರುವಾರ ಮಾತನಾಡಿದರು.

ಇಂದಿನ ಆಧುನಿಕ ಯುಗದಲ್ಲಿ ಭಜನೆಗಳನ್ನು ಉಳಿಸಿ ಬೆಳಸುತ್ತಿರುವುದು ಉತ್ತಮ ಕಾರ್ಯವಾಗಿದೆ. ಸಂಗೀತದಿಂದ ನೆಮ್ಮದಿ ದೊರೆಯುತ್ತದೆ. ನಿತ್ಯ ಮಡಿಬಟ್ಟೆಯಲ್ಲಿ ಭಜನೆ ಮಾಡುವ ಮೂಲಕ ಭಕ್ತಿ ಪ್ರದರ್ಶಿಸಿದ್ದಾರೆ ಎಂದರು.


ಬಸವೇಶ್ವರ ದೇವಸ್ಥಾನ ಕಮೀಟಿಯ ಅಧ್ಯಕ್ಷ ಮಲ್ಲಿಕಾರ್ಜುನ ಕಡಬೂರ, ನಿವೃತ್ತ ಶಿಕ್ಷಕ ವೆಂಕನಗೌಡ, ಪ್ರಮುಖರಾದ ಕನ್ನಾಳ ಬಸವರಾಜ, ರಾಮರಡ್ಡಿ ಕಡಬೂರ, ಶಿವಲಿಂಗಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net