

ಹೂವಿನಹಡಗಲಿ: ಧಾರ್ಮಿಕ ಕಾರ್ಯಗಳನ್ನು ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ದೊರೆತು ಜೀವನೋತ್ಸಾಹ ಹೆಚ್ಚುತ್ತದೆ ಎಂದು ಸೋಗಿ ಪುರವರ್ಗಮಠದ ಸಿದ್ದವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನವಲಿ ಗ್ರಾಮದ ಕೊಟ್ಟೂರೇಶ್ವರ ದೇವಸ್ಥಾನದಲ್ಲಿ ಸೋಮವಾರ ನಡೆದ ಸಿಂಗಟಾಲೂರು ವೀರಭದ್ರೇಶ್ವರ ಸ್ವಾಮಿಯ ಪುರ ಪ್ರವೇಶ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ನಿತ್ಯದ ಜಂಜಾಟಗಳಲ್ಲಿ ಮುಳುಗಿರುವ ಮನುಷ್ಯ ದಾನ, ಧರ್ಮ, ಭಜನೆ, ಪೂಜೆಗಳಂತಹ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಆತ್ಮ ತೃಪ್ತಿಯೊಂದಿಗೆ ಮೋಕ್ಷ ದೊರಕುತ್ತದೆ.
ನಮ್ಮ ಸಂಸ್ಕೃತಿಯ ಆಚರಣೆಗಳಲ್ಲಿ ಕೆಲವು ವೈಜ್ಞಾನಿಕ ಕಾರಣಗಳಿದ್ದು ಅವುಗಳನ್ನು ಕ್ರಮಬದ್ಧವಾಗಿ ಆಚರಿಸುವ ಮೂಲಕ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಉಳಿಸಬೇಕು ಎಂದರು. ಗ್ರಾಮಸ್ಥರಾದ ಚಂದ್ರಶೇಖರಯ್ಯ ಹಾವೇರಿಮಠ, ನಾಗರಾಜ, ವೀರೇಶ, ಬಸವರಾಜ, ಕೊಟ್ರೇಶ, ಶರಣಪ್ಪ ಇತರರಿದ್ದರು.