ಶ್ರೀಕೃಷ್ಣನ ಸಂದೇಶ ಪಾಲಿಸಿದರೆ ನೆಮ್ಮದಿ

hbr (3)
Published on

ಹೆಬ್ರಿ: ಭಗವದ್ಗೀತೆಯಲ್ಲಿ ಕೃಷ್ಣ ನೀಡಿದ ಸಂದೇಶ ಪಾಲಿಸಿದರೆ ಲೋಕ ಸುಭೀಕ್ಷವಾಗಲಿದ್ದು, ಜನರ ಕಷ್ಟಗಳೂ ನಿವಾರಣೆಯಾಗಿ ನೆಮ್ಮದಿ ನೆಲೆಸುತ್ತದೆ ಶ್ರೀ ಭಂಡಾರಕೇರಿ ಮಠದ ವಿದ್ಯೇಶ ತೀರ್ಥ ಶ್ರೀ ಹೇಳಿದರು.

ಗಿಲ್ಲಾಳಿ ಶ್ರೀ ವಿಶ್ವೇಶಕೃಷ್ಣ ಗೋಶಾಲೆಯಲ್ಲಿ ಕೋದಂಡ ರಾಮ ದೇವರ ಪಟ್ಟದಪೂಜೆ ಹಾಗೂ ಶ್ರೀಕೃಷ್ಣನ ತೊಟ್ಟಿಲು ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.

ಗೋಶಾಲೆ ಟ್ರಸ್ಟಿಗಳಾದ ಗಿಲ್ಲಾಳಿ ಪದ್ಮನಾಭ ಆಚಾರ್ಯ, ಎಂ.ರವಿ ರಾವ್ ಹೆಬ್ರಿ, ಲಕ್ಷ್ಮಣ ಭಟ್ ಹೆಬ್ರಿ, ವಿಷ್ಣುಮೂರ್ತಿ ಆಚಾರ್ಯ ಗಿಲ್ಲಾಳಿ, ಶ್ರೀಕಾಂತ ಭಟ್ ಅಜೆಕಾರು, ಮುದ್ರಾಡಿ, ಹೆಬ್ರಿ ನಿವಾಸಿಗಳು ಉಪಸ್ಥಿತರಿದ್ದರು. ಹೆಬ್ರಿ ಸುದರ್ಶನ ಜೋಯಿಸ್, ಉಪ್ಪಳ ಸುದರ್ಶನ ಕಲ್ಕೂರ್, ಬಲ್ಲಾಡಿ ವೇದವ್ಯಾಸ ಭಟ್, ಹೆಬ್ರಿ ಶಿಶಿರ ಜೋಯಿಸ್ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net