

ನರಗುಂದ: ದೇವರ ದರ್ಶನದಿಂದ ಶಾಂತಿ, ಸಮಾಧಾನ ದೊರೆಯಲಿದೆ. ಹೀಗಾಗಿ ಭಕ್ತರು ತಮ್ಮ ಮನೆ ಜಂಜಾಟಗಳ ಮಧ್ಯೆ ಸ್ವಲ್ಪ ಬಿಡುವು ಮಾಡಿಕೊಂಡು ಮಂದಿರಗಳಿಗೆ ಹೋಗಿ ಪೂಜೆ ಮಾಡಿಸುವ ಸಂಪ್ರದಾಯ ನಿಜಕ್ಕೂ ಪುಣ್ಯದ ಕೆಲಸವಾಗಿದೆ ಎಂದು ಸದ್ಭಾವನಾ ಪ್ರಶಸ್ತಿ ಪುರಸ್ಕೃತ ರಾಘವೇಂದ್ರ ಗುಜಮಾಗಡಿ ಹೇಳಿದರು.
ನರಗುಂದ ಸಮೀಪದ ಅಮರಗೋಳದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಕಾರ್ತಿಕ ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಶ್ರೀಮಠದಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ರೈತರನ್ನು ಸರ್ಕಾರ ಗೌರವದಿಂದ ಕಾಣುವ ಮೂಲಕ ಅವರ ಬೇಡಿಕೆ ೕಡೇರಿಸಲು ಆದ್ಯತೆ ನೀಡಬೇಕು. ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗೊಳಿಸಬೇಕು. ದೇವತಾ ಕಲ್ಯಾಣ ಕಾರ್ಯಗಳು ಜನತೆಗೆ ಒಳಿತು ಮಾಡಲಿ ಎಂದರು.
ರಾಮಲಿಂಗೇಶ್ವರ ಮಂದಿರದ ಮಹಾಂತಲಿಂಗ ಸ್ವಾಮೀಜಿ, ಬಸವಾನಂದ ಸ್ವಾಮೀಜಿ ಮಾತನಾಡಿದರು. ವರ್ತಕ ಗುರುಪ್ರಸಾದ ಗುಜಮಾಗಡಿ ಅವರನ್ನು ಸತ್ಕರಿಸಲಾಯಿತು. ಸೋಮನಗೌಡ ಪಾಟೀಲ, ಈಶ್ವರಗೌಡ ಪಾಟೀಲ ಕುಲಕರ್ಣಿ, ಸಂತೋಷ ಪಾಟೀಲ, ಪ್ರಮೋದ ಬೀಳಗಿ, ತೀರ್ಥಗೌಡ ಮುದಿಗೌಡ್ರ, ಬಸವರಾಜ ಸಾತಿಹಾಳ, ಗುರುಪಾದಯ್ಯ ಹಿರೇಮಠ, ಶೇಖರಗೌಡ ಬೆಳಹಾರ, ಬಸನಗೌಡ ರಾಮನಗೌಡ್ರ, ಸಿದ್ದನಗೌಡ ನರೇಂದ್ರ, ಪಾರ್ವತೆವ್ವ ಬೀಳಗಿ, ನಿಂಗಮ್ಮ ಪಾಟೀಲ, ಪಕ್ಕೀರಪ್ಪ ಮುನೇನಕೊಪ್ಪ, ಸಂಗಪ್ಪ ಮೋಹಿತೆ, ರಾಜು ಗದಿಗೆಪ್ಪನವರ ಇತರರು ಇದ್ದರು.