ದೇವಿ ಆರಾಧನೆಯಿಂದ ಶಾಂತಿ-ಸಮೃದ್ಧಿ

Kalasotsava
Published on

ಗಜೇಂದ್ರಗಡ: ತಾಲೂಕಿನ ಗೋಗೇರಿ ಗ್ರಾಮದಲ್ಲಿ ತುಳಜಾಭವಾನಿ ದೇವಸ್ಥಾನದ ಕಳಸಾರೋಹಣ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.

ಬೆಳಗ್ಗೆ ಗೋಪುರಕ್ಕೆ ಅಭಿಷೇಕ ನಡೆಸಿದ ಬಳಿಕ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ದೇವಸ್ಥಾನದ ಗೋಪುರಕ್ಕೆ ಕಳಸ ನೀಡಿದ ಮಂತ್ರಿ ಕುಟುಂಬದವರಿಂದ ರಾಜಣ್ಣ ಪೂಜಾರ ಪೌರೋಹಿತ್ಯದಲ್ಲಿ ನೂತನ ಕಳಸದ ಪೂಜೆ ಹಾಗೂ ಹೋಮ ನಡೆಯಿತು.

ಸೋಮವಾರ ಕಳಸವನ್ನು ವಿವಿಧ ವಾದ್ಯಗಳೊಂದಿಗೆ ಗಜೇಂದ್ರಗಡದಿಂದ ಗ್ರಾಮದ ದೇವಸ್ಥಾನದ ವರೆಗೆ ಮೆರವಣಿಗೆ ಮೂಲಕ ತರಲಾಯಿತು. ಗ್ರಾಮದ ಮಹಿಳೆಯರು ಪೂರ್ಣಕುಂಭ ಹೊತ್ತು ಕಳಸ ಸ್ವಾಗತಿಸಿದರು.

ತುಳಜಾಭವಾನಿ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ಅಧ್ಯಕ್ಷ ಹೇಮಾಪತಿ ಭೋಸಲೆ ಮಾತನಾಡಿ, ಗ್ರಾಮದಲ್ಲಿ ದೇವಿ ಆರಾಧನೆಯಿಂದ ದುಷ್ಟಶಕ್ತಿಗಳು ದೂರವಾಗುವುದರ ಜತೆಗೆ ಗ್ರಾಮದಲ್ಲಿ ಶಾಂತಿ, ಸಮೃದ್ಧಿ ನೆಲೆಸುತ್ತದೆ ಎಂದರು.

ಸಂತೋಷ ಮಂತ್ರಿ, ಆನಂದ ಮಂತ್ರಿ, ಶೀತಲ ಮಂತ್ರಿ, ಜಗದೀಶ ಮಂತ್ರಿ, ಹನಮಪ್ಪ ಹೊರಪೇಟೆ, ಬಸವರಾಜ ಮೂಲಿಮನಿ, ಮಲ್ಲಿಕಾರ್ಜುನ ಗಾರಗಿ, ಮುನ್ನೆಶಪ್ಪ ಭೋಸಲೆ, ಸಂಬಾಜಿ ಗಾರಗಿ, ಶರಣಪ್ಪ ಅಳವಂಡಿ, ಕೆ.ಕೆ. ಭಾಗವನ, ಕೆ.ಎಸ್. ಕೊಡತಗೇರಿ, ಮಲ್ಲಪ್ಪ ಭೋಸಲೆ, ಕಳಕಪ್ಪ ಅಡವಿ, ಪರಸಪ್ಪ ಭೋಸಲೆ, ಭೀಮಪ್ಪ ಚೋಪಡೆ, ದುರಗಪ್ಪ ಗಾರಗಿ, ಶರಣಪ್ಪ ಅಳವಂಡಿ, ಎಂ.ಡಿ. ಭೋಸಲೆ, ನಿಂಗಪ್ಪ ಗಾರಗಿ, ಮಾದೇವಪ್ಪ ಹೊಸಮನಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net