

ಮೈಸೂರು: ಎಲ್ಲ ಹಬ್ಬಗಳನ್ನು ಎಲ್ಲ ಸಮುದಾಯದ ಜನರು ಸೇರಿಕೊಂಡು ಆಚರಿಸಿದಾಗ ಸಮಾಜದಲ್ಲಿ ಶಾಂತಿ ಸಾಮರಸ್ಯವನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದು ಶಾಸಕ ಕೆ.ಹರೀಶ್ ಗೌಡ ಹೇಳಿದರು.
ನಗರದ ಬಿಷಪ್ ನಿವಾಸದಲ್ಲಿ ಸೋಮವಾರ ಬಿಷಪ್ ಡಾ.ಬೆರ್ನಾಡ್ ಮೊರಾಸ್ ಅವರಿಗೆ ಕ್ರಿಸ್‌ಮಸ್ ಹಬ್ಬದ ಶುಭಾಶಯ ಕೋರಿ ಮಾತನಾಡಿದರು.
ಯೇಸು ಕ್ರಿಸ್ತರ ಪ್ರೀತಿ ಮತ್ತು ಕಾರುಣ್ಯದ ಸಂದೇಶ ಸಮಾಜಕ್ಕೆ ದಾರಿದೀಪವಾಗಿದೆ. ಕ್ರಿಸ್‌ಮಸ್ ಸೇರಿದಂತೆ ಎಲ್ಲ ಹಬ್ಬಗಳನ್ನು ಎಲ್ಲ ಜನರು ಸೇರಿಕೊಂಡು ಆಚರಿಸಿದಾಗ ಸಮಾಜದಲ್ಲಿ ಶಾಂತಿ ಸಾಮರಸ್ಯವನ್ನು ಕಾಪಾಡಲು ಸಾಧ್ಯವಾಗಲಿದೆ ಎಂದರು.
ಕಾಂಗ್ರೆಸ್ ಮುಖಂಡರಾದ ಸುಜಿತ್ ಕುಮಾರ್, ಪ್ರಸನ್ನ ಲಕ್ಷಣ್, ಮಂಜುನಾಥ್, ಮಹದೇಶ್, ಮೋಹನ್, ಚಂದ್ರು, ಬಸವರಾಜು ಇದ್ದರು.