ಪಿಡಿಒಗಳು ಜನರನ್ನು ಹಚ್ಚಿಕೊಳ್ಳಬೇಕು

gttt
Published on

ಮೈಸೂರು: ಪಿಡಿಒಗಳು ಯಾರೋ ಕೆಲವು ನಾಯಕರನ್ನು ಹಚ್ಚಿಕೊಳ್ಳುವುದಲ್ಲ; ಅಲ್ಲಿನ ಜನರನ್ನು ಹಚ್ಚಿಕೊಳ್ಳಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಕೆಲವರನ್ನು ಓಲೈಸಿ, ಯಾರದೋ ಕೆಂಗಣ್ಣಿಗೆ ಗುರಿಯಾಗಬೇಕೇಕೆ. ಪಿಡಿಒಗಳನ್ನು ನಾನೇನೂ ವರ್ಗಾವಣೆ ಮಾಡಿಸುತ್ತಿಲ್ಲ. ಸರ್ಕಾರವೇ ದಿಢೀರನೆ ವರ್ಗಾವಣೆ ಮಾಡುತ್ತಿದೆ. ನಮ್ಮ ಕ್ಷೇತ್ರದಲ್ಲಿರುವವರನ್ನು ಬೇರೆ ಕ್ಷೇತ್ರಕ್ಕೆ ವರ್ಗಾಯಿಸಲು ಅವಕಾಶ ಕೊಡಬಾರದು. ಅಧಿಕಾರಿಗಳು ಕೂಡ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು. ಚೆನ್ನಾಗಿ ಕೆಲಸ ಮಾಡುತ್ತಿರುವವರನ್ನು ನಮ್ಮಲ್ಲೇ ಉಳಿಸಿಕೊಳ್ಳಬೇಕು ಎಂದರು.

ನಮ್ಮ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೆಂಗಳೂರಿನಂತೆ ಒಂದು ಗುಂಟೆಗೂ ಬಹಳ ಬೆಲೆ ಬಂದಿದೆ. ಹೀಗಾಗಿ ಯಾರೋ ಒಂದು ಗುಂಟೆಯನ್ನೂ ಕೊಡುವುದಕ್ಕೆ ಬಯಸುವುದಿಲ್ಲ. ಕಂದಾಯ ದಾಖಲೆೆಯೇ ಶಾಶ್ವತ ದಾಖಲೆ. ಅದನ್ನು ಪರಿಗಣಿಸಿ ಜಾಗ ಪಡೆದುಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net