ಪಿಡಿಒ ನೇಮಕಕ್ಕೆ ಗ್ರಾಮಸ್ಥರ ಒತ್ತಾಯ

4
ಖಿಳೇಗಾಂವ ಗ್ರಾಮ ಪಂಚಾಯಿತಿ ಕಾರ್ಯಾಲಯ.
Published on

ಸಂಬರಗಿ: ಗಡಿ ಭಾಗದ ಖಿಳೇಗಾಂವ ಗ್ರಾಪಂಗೆ ಒಂದು ತಿಂಗಳಿಂದ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಇಲ್ಲದ ಕಾರಣ
ಹಲವಾರು ಕೆಲಸಗಳು ಸ್ಥಗಿತಗೊಂಡಿದ್ದು, ಶೀಘ್ರವೇ ಪಿಡಿಒ ನೇಮಕ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಖಿಳೇಗಾಂವ ಗ್ರಾಪಂ ವ್ಯಾಪ್ತಿಯಲ್ಲಿ ಖಿಳೇಗಾಂವ, ಆಜೂರ ಗ್ರಾಮಗಳು ಬರುತ್ತವೆ. ಪಿಡಿಒ ದೀರ್ಘಕಾಲ ರಜೆ ತೆರಳಿದ ಬಳಿಕ ಇದುವರೆಗೂ ಅಧಿಕಾರಿ ನೇಮಕಗೊಂಡಿಲ್ಲ. ಗ್ರಾಮದಲ್ಲಿರುವ ನೀರಿನ ಸಮಸ್ಯೆ, ಒಳಚರಂಡಿ ಸಮಸ್ಯೆ ಇನ್ನಿತರ ಕಾಮಗಾರಿಗಳು ಸ್ಥಗಿತಗೊಂಡಿವೆ. ಕಳೆದ ಒಂದು ತಿಂಗಳಿಂದ ಜನರಿಗೆ ತೊಂದರೆಯಾಗುತ್ತಿದೆ.

ಈ ಕುರಿತು ಮೇಲಧಿಕಾರಿಗಳಿಗೆ ಗಮನಕ್ಕೆ ತಂದರೂ ಕ್ರಮಕೈಗೊಂಡಿಲ್ಲ. ಬೇಸಿಗೆ ಕಾಲ ಆರಂಭವಾಗಿದ್ದು ನೀರು ಹಾಗೂ ಉದ್ಯೋಗ ಖಾತ್ರಿ ಕೆಲಸ ಇಲ್ಲದ ಕಾರಣ ಜನರು ಸಮಸ್ಯೆಯಲ್ಲಿ ಸಿಲುಕಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಶೀಘ್ರ ಪಿಡಿಒ ನೇಮಕ ಮಾಡಬೇಕೆಂದು ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದಪ್ಪ ಕುಮಟಗಿ, ಸದಸ್ಯೆ ಸವಿತಾ ಬನಸೊಡೆ, ಸ್ವಪ್ನಿಲ್ ಬನಸೊಡೆ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net