ಪಿಡಿಒ ಮೇಲೆ ಹಲ್ಲೆ, ಇನ್ನೋರ್ವ ಬಂಧನ

Arrest Kaidhi
Published on

ಬೆಳಗಾವಿ: ತಾಲೂಕಿನ ಮರಣಹೋಳ ಗ್ರಾಮದಲ್ಲಿ ಪಿಡಿಒ, ಗ್ರಾಮಲೆಕ್ಕಾಧಿಕಾರಿಗಳ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಕಾಕತಿ ಠಾಣೆ ಪೊಲೀಸರು ಮಂಗಳವಾರ ಇನ್ನೋರ್ವನನ್ನು ಬಂಧಿಸಿದ್ದಾರೆ. ಮರಣಹೋಳ ಗ್ರಾಮದ ಲಕ್ಷ್ಮಣ ಸಂತರಾಮ ಗಾವಡೆ (26) ಬಂಧಿತ ವ್ಯಕ್ತಿ.

ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದ ಶಂಕಿತರ ಗಂಟಲು ದ್ರವ ಸಂಗ್ರಹ ತೆಗೆದುಕೊಳ್ಳಲು ಕಳೆದ ಶುಕ್ರವಾರ ಹೊಸ ವಂಟಮೂರಿ ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ಆರೋಗ್ಯ ಸಿಬ್ಬಂದಿ ಆಗಮಿಸಿದ್ದ ವೇಳೆ ಕ್ವಾರಂಟೈನ್‌ನಲ್ಲಿರುವ ಇಬ್ಬರು ಮತ್ತು 6 ಜನ ಹೊರಗಿನವರು ಇವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಅದರಲ್ಲಿ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net