

ಕಾರವಾರ: ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೋವಿಂದ ಜಿ. ಶೆಟ್ಟಿ ಅವರಿಗೆ ಆಗಸ್ಟ್ ತಿಂಗಳ ಪಿಡಿಒ ಆಫ್ ದಿ ಮಂತ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ನೀಡುವ ಪ್ರಶಸ್ತಿ ಇದಾಗಿದ್ದು, ಸರ್ಕಾರಿ ಯೋಜನೆಗಳ ಅನುಷ್ಠಾನ, ಬಿಲ್ ವಸೂಲಿ ಸೇರಿ ಗ್ರಾಪಂ ಪಿಡಿಒ ಅವರ ಕಾರ್ಯನಿರ್ವಹಣೆಯನ್ನು ಪರಿಗಣಿಸಿ ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ ನೇತೃತ್ವದ ಸಮಿತಿ ಪ್ರಶಸ್ತಿಗೆ ಪಿಡಿಒಗಳನ್ನು ಆಯ್ಕೆ ಮಾಡುತ್ತಿದೆ.
ಗ್ರಾಮೀಣ ಜನರಿಗಾಗಿ ಸರ್ಕಾರ ಜಾರಿಗೊಳಿಸುವ ಜನಪರ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಯಾವುದೇ ವಿಳಂಬ ಹಾಗೂ ಜನರಿಂದ ಆಕ್ಷೇಪಗಳು ಬಾರದಂತೆ ಉತ್ತಮವಾಗಿ ಕರ್ತವ್ಯ ನಿರ್ವಹಿಸಿರುವುದನ್ನು ಅಧಿಕಾರಿಗಳು ಗುರುತಿಸಿದ್ದಾರೆ ಎಂದು ಪಿಡಿಒ ಆಫ್ ದಿ ಮಂತ್ ಪ್ರಶಸ್ತಿಗೆ ಆಯ್ಕೆಯಾದ ಜಿ.ಜಿ.ಶೆಟ್ಟಿ ತಿಳಿಸಿದ್ದಾರೆ.
ಕರ್ತವ್ಯವನ್ನು ಮೇಲಾಧಿಕಾರಿಗಳು ಗುರುತಿಸಿ ಪಿಡಿಒ ಆಫ್ ದಿ ಮಂತ್ ಪ್ರಶಸ್ತಿ ಪ್ರಶಸ್ತಿ ನೀಡಿರುವುದಕ್ಕೆ ಖುಷಿಯಾಗಿದೆ. ಜೊತೆಗೆ ಪ್ರಶಸ್ತಿ ಲಭಿಸಿದ್ದು, ಆತ್ಮವಿಶ್ವಾಸ ವೃದ್ಧಿಯೊಂದಿಗೆ ಧಕ್ಷತೆಯಿಂದ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವಂತಹ ಜವಾಬ್ದಾರಿ ಹೆಚ್ಚಿಸಿದೆ ಎಂದಿದ್ದಾರೆ.
ಜೆ.ಜೆ. ಶೆಟ್ಟಿ ಅವರು ಬಿಎ ಪದವಿದರರಾಗಿದ್ದು, 1997ರಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಪ್ರಾರಂಭಿಸಿದ್ದಾರೆ. ಯಲ್ಲಾಪುರ ತಾಲೂಕಿನ ಉಮ್ಮಚಗಿ ಗ್ರಾಮ ಪಂಚಾಯಿತಿ ಜೆ.ಜೆ. ಶೆಟ್ಟಿ ಅವರ ಪ್ರಭಾರ ಕಾರ್ಯಾವಧಿಯ 2021-22ರಲ್ಲಿ ಗಾಂಧಿ ಗ್ರಾಮ ಪುರಸ್ಕಾರ ಹಾಗೂ ಹಿತ್ಲಳ್ಳಿ ಗ್ರಾಮ ಪಂಚಾಯತಿಯ ಕಾರ್ಯಾವಧಿಯ 2021-22ರಲ್ಲಿ ಶೇ. 100 ರಷ್ಟು ಆಸ್ತಿ ಹಾಗೂ ನೀರಿನ ಕರ ಸಂಗ್ರಹಣೆ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಶೇ. 93ರಷ್ಟು ಗುರಿ ಸಾಧನೆ ಮಾಡಲಾಗಿದೆ.
ಹಾಗೇ ಮಿಷನ್ ಅಂತ್ಯೋದಯ ಮತ್ತು ದೂರದೃಷ್ಟಿ ಯೋಜನೆ, ಆಸ್ತಿ ಸಮೀಕ್ಷೆ ಕಾರ್ಯದಲ್ಲಿ ಉತ್ತಮ ಸಾಧನೆ ತೋರಲಾಗಿದೆ. ಜೊತೆಗೆ ವಸತಿ ಜನೆಯಡಿ ನಿಗದಿತ ಗುರಿಯಂತೆ 19 ಮನೆಗಳ ನಿರ್ಮಾಣದಲ್ಲಿ ಈಗಾಗಲೇ 9 ಮನೆಗಳು ಪೂರ್ಣಗೊಂಡಿದ್ದು, 5 ಮನೆಗಳು ಲಿಂಟಲ್ ಹಾಗೂ 4 ಮನೆಗಳು ಗೋಡೆ ಹಂತದಲ್ಲಿವೆ.
ಉಕ ಜಿಪಂ ಬಗ್ಗೆ ತಿಳಿಯಲು ಈ ಲಿಂಕ್ ಒತ್ತಿ: https://www.facebook.com/profile.php?id=100060125032150&mibextid=ZbWKwL