ಕಾಂಕ್ರೀಟ್ ರಸ್ತೆ ಕಾಮಗಾರಿ ಪರಿಶೀಲಿಸಿದ ಪಿಡಿಒ

12Kush01
ಕೂಡುಮಂಗಳೂರು ಗ್ರಾಪಂನ ಎರಡನೇ ವಾರ್ಡ್‌ನ ವಿನಾಯಕ ಬಡಾವಣೆಯಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಸ್ಥಳೀಯ ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್, ಪಿಡಿಒ ಸಂತೋಷ್ ಪರಿಶೀಲಿಸಿದರು. ಗ್ರಾಮಸ್ಥರು ಇದ್ದರು.
Published on

ಕುಶಾಲನಗರ: ಕೂಡುಮಂಗಳೂರು ಗ್ರಾಪಂನ ಎರಡನೇ ವಾರ್ಡ್‌ನ ವಿನಾಯಕ ಬಡಾವಣೆಯಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಸಲಾಗಿದ್ದು, ಕಾಮಗಾರಿಯನ್ನು ಸ್ಥಳೀಯ ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್ ಹಾಗೂ ಪಿಡಿಒ ಸಂತೋಷ್ ಬುಧವಾರ ಪರಿಶೀಲನೆ ನಡೆಸಿದರು.

ವಿನಾಯಕ ಬಡಾವಣೆಯ ಸೋಮಶೇಖರ್ ಹಾಗೂ ಆರಿಫ್ ಅವರ ಮನೆವರೆಗೆ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ನಡೆಸಲಾಗಿದೆ.
ಗ್ರಾಮ ಪಂಚಾಯಿತಿ ಸದಸ್ಯ ಕೆ.ಬಿ.ಶಂಶುದ್ಧೀನ್ ಮಾತನಾಡಿ, ಕೂಡುಮಂಗಳೂರು ಗ್ರಾಪಂನ ವಿನಾಯಕ ಬಡಾವಣೆಯ ಅಭಿವೃದ್ಧಿ ಶೂನ್ಯವಾಗಿತ್ತು. ನಮ್ಮ ಅವಧಿಯಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸವನ್ನು ಮಾಡಲಾಗಿದೆ. ಸಿಗುವ ಅನುದಾನವನ್ನು ಸಮಾನವಾಗಿ ಎಲ್ಲ ಗ್ರಾಮಗಳಿಗೂ ಮೀಸಲಿಟ್ಟು ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ವಾರ್ಡ್ ಅಭಿವೃದ್ಧಿಗೆ ಅನುದಾನ ನೀಡುವ ಬಗ್ಗೆ ಶಾಸಕ ಡಾ.ಮಂತರ್ ಗೌಡ ಅವರಿಗೆ ಮನವಿ ನೀಡಲಾಗಿದೆ. ಶಾಸಕರು ಅನುದಾನ ನೀಡುವ ಭರವಸೆ ನೀಡಿದ್ದಾರೆ. ಶಾಸಕರ ಅನುದಾನ ಲಭಿಸಿದ್ದಲ್ಲಿ ವಾರ್ಡನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಸಹಕಾರಿಯಾಗಲಿದೆ ಎಂದರು. ವಿನಾಯಕ ಬಡಾವಣೆಯ ನಿವಾಸಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net