ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

13M.D.R.3 SACHIN PDO
Published on

ಮದ್ದೂರು: ತಾಲೂಕಿನ ಕೊಪ್ಪ ಹೋಬಳಿ ತಗ್ಗಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಲಂಚ ಪಡೆಯುತ್ತಿದ್ದಾಗ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಚಿನ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಪೌತಿ ಖಾತೆ ಮಾಡಿಕೊಡಲು ಚಿಕ್ಕೊನನಹಳ್ಳಿ ಗ್ರಾಮದ ಶಿವಲಿಂಗಯ್ಯ ಅವರಿಗೆ ಪಿಡಿಒ ಸಚಿನ್ 40 ಸಾವಿರ ರೂ.ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಸೋಮವಾರ ಶಿವಲಿಂಗಯ್ಯ ಅವರಿಂದ 5 ಸಾವಿರ ರೂ.ಮುಂಗಡವಾಗಿ ಲಂಚ ಪಡೆಯುವ ವೇಳೆ ಈ ಮೊದಲೇ ನೀಡಿದ್ದ ದೂರಿನನ್ವಯ

ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಪಿಡಿಒ ಸಚಿನ್ ಅವರನ್ನು ವಶಕ್ಕೆ ಪಡೆದಿದ್ದಾರೆ.

ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸುನೀಲ್ ಹಾಗೂ ಅಧಿಕಾರಿಗಳಾದ ಕುಮಾರ್ ಹಾಗೂ ಬ್ಯಾಟರಾಯಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net