ಪಿಡಿಒ, ಅಧ್ಯಕ್ಷರಿಂದ ಸದಸ್ಯರ ಕಡೆಗಣನೆ

ಜೋಸೆಫ್
ಜೋಸೆಫ್
Published on

ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ತೋರಣದಿನ್ನಿ ಗ್ರಾಪಂನಲ್ಲಿ ಕಾಮಗಾರಿಗಳ ಕ್ರಿಯಾಯೋಜನೆ, ಬಿಲ್ ಪಾಸ್ ಮಾಡಲು ಅಧ್ಯಕ್ಷರು ಮತ್ತು ಪಿಡಿಒ ಅವರು ಸದಸ್ಯರನ್ನು ಕಡೆಗಣಿಸುತ್ತಿದ್ದಾರೆ ಎಂದು ಸದಸ್ಯ ಜೋಸೆಫ್ ಆರೋಪಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೋರಣದಿನ್ನಿ ಗ್ರಾಪಂಗೆ ಗೋಗಿ ಹೆಬ್ಬಾಳ, ಮಲ್ಕಾಪುರ ಹಾಗೂ ತೋರಣದಿನ್ನಿ ಸೇರಿವೆ. ಗ್ರಾಪಂನಿಂದ ರೂಪಿಸಲಾದ ಕ್ರಿಯಾಯೋಜನೆಗಳು, ಕಾಮಗಾರಿ ಬಿಲ್‌ಗಳನ್ನು ಪಾಸ್ ಮಾಡುವುದು ಸೇರಿ ವಿವಿಧ ಕಾರ್ಯಗಳಿಗೆ ಅಧ್ಯಕ್ಷ ಈರಪ್ಪ ಹಾಗೂ ಪಿಡಿಒ ತಿಮ್ಮಪ್ಪ ಅವರು ಕೆಲ ಸದಸ್ಯರನ್ನು ಮಾತ್ರ ಪರಿಗಣಿಸುತ್ತಿದ್ದು, ಉಳಿದವರನ್ನು ನಿರ್ಲಕ್ಷಿಸುತ್ತಿದ್ದಾರೆ. ವಿಚಾರಿಸಿದರೆ ನಿಂಧಿಸುತ್ತಾರೆ ಎಂದು ತಿಳಿಸಿದರು.

ಈ ಬಗ್ಗೆ ಹಲವು ಬಾರಿ ತಾಪಂ ಇಒ ಅಮರೇಶ ಯಾದವ್‌ಗೆ ದೂರು ಸಲ್ಲಿಸಿದರೂ ಕ್ರಮಕ್ಕೆ ಮುಂದಾಗಿಲ್ಲ. ಜಿಪಂ ಸಿಇಒ ಹಾಗೂ ಪಂಚಾಯತ್ ರಾಜ್ ಇಲಾಖೆ ಆಯುಕ್ತರಿಗೂ ದೂರು ನೀಡಲಾಗಿದೆ ಎಂದರು. ಕೂಡಲೇ ಪಿಡಿಒ ಹಾಗೂ ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರಮುಖರಾದ ಮಲ್ಲಮ್ಮ, ಬಸವಲಿಂಗಮ್ಮ, ಗಂಗಪ್ಪ, ಹನುಮಂತ, ಭೀಮಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net