ಯರಿಕೊಪ್ಪ ಪಿಡಿಒ ಆತ್ಮಹತ್ಯೆ ಯತ್ನ ಪ್ರಕರಣ; ಕ್ಷೇಮಾಭಿವೃದ್ಧಿ ಸಂಘದಿ೦ದ ಅನಿರ್ದಿಷ್ಟಾವಧಿ ಧರಣಿ

5 Dwd 5
Published on

ಧಾರವಾಡ: ತಾಲೂಕಿನ ಯರಿಕೊಪ್ಪ ಗ್ರಾಮದ ಪಿಡಿಒ ಆತ್ಮ ಹತ್ಯೆ ಯತ್ನಕ್ಕೆ ಕಾರಣನಾದ ಮಲ್ಲಿಕಾರ್ಜುನ ರೊಟ್ಟಿಗವಾಡ ಎಂಬುವರನ್ನು ಕೂಡಲೇ ಬಂಽಸಿ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿ ರಾಜ್ಯ ಪಿಡಿಒ ಕ್ಷೇಮಾಭಿವೃದ್ಧಿ ಸಂಘದಿAದ ಜಿಲ್ಲಾ ಪಂಚಾಯಿತಿ ಎದುರು ಮಂಗಳವಾರದಿAದ ಅನಿರ್ದಿಷ್ಟಾವಽ ಧರಣಿ ಆರಂಭಿಸಲಾಯಿತು.
ಸAಘದ ರಾಜ್ಯಾಧ್ಯಕ್ಷ ರಾಜು ವಾರದ ನೇತೃತ್ವದಲ್ಲಿ ಅಭಿವೃದ್ಧಿ ಅಽಕಾರಿಗಳು ಜಿಲ್ಲಾ ಪಂಚಾಯಿತಿ ಸಿಇಒ ಸ್ವರೂಪ ಟಿ.ಕೆ. ಅವರನ್ನು ಭೇಟಿ ಮಾಡಿ ಚರ್ಚಿಸಿದರು. ನಂತರ ಜಿ.ಪಂ. ಆವರಣದಲ್ಲಿ ಅನಿರ್ದಿಷ್ಟಾವಽ ಧರಣಿ ಕೈಗೊಂಡರು.
ಈ ವೇಳೆ ರಾಜು ವಾರದ ಮಾತನಾಡಿ, ಪಿಡಿಒ ನಾಗರಾಜ ಅವರು ವಿಷ ಸೇವಿಸುವ ಮೊದಲು ಆರ್‌ಟಿಐ ಕಾರ್ಯಕರ್ತ ಮಲ್ಲಿಕಾರ್ಜುನ ರೊಟ್ಟಿಗವಾಡ ಕಿರುಕುಳವನ್ನು ಪ್ರಸ್ತಾಪಿಸಿ ವಿಡಿಯೋ ಮಾಡಿದ್ದಾರೆ. ಆತ್ಮಹತ್ಯೆ ಯತ್ನ ಪ್ರಕರಣ ನಡೆದು ೪- ೫ ದಿನ ಕಳೆದರೂ ಆರೋಪಿಯನ್ನು ಬಂಽಸಿಲ್ಲ. ಆದ್ದರಿಂದ ಆರೋಪಿಯ ಬಂಧನವಾಗುವವರೆಗೆ ಹೋರಾಟ ಮುಂದುವರಿಸಲಾಗುವುದು. ಬುಧವಾರದಿಂದ ಬೇರೆ ಜಿಲ್ಲೆಗಳ ಪಿಡಿಒಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಪುಷ್ಪಾವತಿ ಮೇದಾರ, ಸಿ.ಎಂ. ಧರೆಣ್ಣವರ, ಬಿ.ಎ. ಮಡಿವಾಳರ, ತನ್ವೀರ್ ಡಿ., ಬಾಬು ದೇಸಾಯಿ, ಕುಮಾರ ಪಾಟೀಲ, ಶೈಲಾ ನೀಲಗಾರ, ಅನಿತಾ ಹಿರೇಮಠ, ಸಿದ್ದು ಐರಣಿ, ಆನಂದ ನಾವಳ್ಳಿ, ಜ್ಯೋತಿ ಚಲವಾದಿ, ಪರಶುರಾಮ ಕವಲೂರ, ಮಲ್ಲಿಕಾರ್ಜುನ ಕೋಯಪ್ಪನವರ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net