ಪಿಸಿಬಿ ವಿನ್ಯಾಸ, ತಯಾರಿಕೆ ಉಪಯುಕ್ತ

PCB design, manufacturing useful
Published on

ವಿಜಯಪುರ: ವಿದ್ಯಾರ್ಥಿಗಳಿಗೆ ಪಿಸಿಬಿ ವಿನ್ಯಾಸ ಮತ್ತು ತಯಾರಿಕೆ ಉಪಯುಕ್ತವಾಗಿದ್ದು, ಇಲೆಕ್ಟ್ರಾನಿಕ್ಸ್​ ಕೌಶಲದಲ್ಲಿ ಪ್ರಾಯೋಗಿಕ ಅನುಭವ ಒದಗಿಸುವ ಜತೆಗೆ ಕಸ್ಟಮ್​ ವಿನ್ಯಾಸಗೊಳಿಸಿದ ಮೂಲ ಮಾದರಿಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ ಎಂದು ಪ್ರಾಚಾರ್ಯ ಡಾ. ಮಂಜುನಾಥ ಪಿ. ಹೇಳಿದರು.

ನಗರದ ಬಿಎಲ್​ಡಿಇ ಸಂಸ್ಥೆಯ ಡಾ. ಫ.ಗು. ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ ಇಲೆಕ್ಟ್ರಾನಿಕ್ಸ್​ ಹಾಗೂ ಕಮ್ಯುನಿಕೇಶನ್​ ಇಂಜಿನಿಯರಿಂಗ್​ ವಿಭಾಗದಲ್ಲಿ ಪಿಸಿಬಿ ಡಿಸೈನ್​ ಆ್ಯಂಡ್​ ಫ್ಯಾಬ್ರಿಕೇಷನ್​ ಎಂಬ ವಿಷಯದ ಮೇಲೆ ಹಮ್ಮಿಕೊಂಡಿದ್ದ ಎರಡು ದಿನಗಳ ವಿದ್ಯಾರ್ಥಿ ಅಭಿವೃದ್ಧಿ ಕಾರ್ಯಾಗಾರವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಡಿದರು.

ಸಂಪನ್ಮೂಲ ವ್ಯಕ್ತಿ ಆರ್​. ಲಾಜಿಕ್​ ಟೆಕ್ನಾಲಜಿಯ ರಾಕೇಶ ಮಾತನಾಡಿ, ವಿದ್ಯಾರ್ಥಿಗಳಿಗೆ ಸಂಪೂರ್ಣ ವಿಷಯ ಾನ ಅರಿಯಲು ಇಂತಹ ಕಾರ್ಯಾಗಾರಗಳು ಅವಶ್ಯಕ ಎಂದರು.ಇಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಶನ್​ ವಿಭಾಗದ ಮುಖ್ಯಸ್ಥೆ ಡಾ. ಜಯಲಕ್ಷಿ$್ಮ ಗೋನಾಳ, ಕಾರ್ಯಾಗಾರ ಸಂಯೋಜಕ ಡಾ. ಉಮೇಶ ದೀತ, ಡಾ. ಎಸ್​.ಕೆ. ಪಡಗಾನೂರ, ರವಿ ಹತ್ತಿ ಮತ್ತಿತರರಿದ್ದರು.

ವಿಜಯಪುರದ ಬಿಎಲ್​ಡಿಇ ಸಂಸ್ಥೆಯ ಡಾ. ಫ.ಗು. ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ ಪಿಸಿಬಿ ಡಿಸೈನ್​ ಆ್ಯಂಡ್​ ಫ್ಯಾಬ್ರಿಕೇಷನ್​ ಎಂಬ ವಿಷಯದ ಕಾರ್ಯಾಗಾರ ನಡೆಯಿತು. ಡಾ. ಮಂಜುನಾಥ. ಪಿ., ರಾಕೇಶ, ಡಾ. ಜಯಲಕ್ಷಿ$್ಮ ಗೋನಾಳ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net