19 ನೇಸಾಂಖ್ಯಿಕ ದಿನಾಚರಣೆ

pc mahanobis
Published on

ಕಾರವಾರ: ಪ್ರಖ್ಯಾತ ಸಂಖ್ಯಾ ಶಾಸ್ತ್ರಜ್ಞ  ಪ್ರೊ. ಪಿ. ಸಿ. ಮಹಾ¯ನೋಬಿಸ್‌ರವರ ಜನ್ಮ ದಿನದ ಅಂಗವಾಗಿ “19 ನೇಸಾಂಖ್ಯಿಕ ದಿನಾಚರಣೆ” ಯನ್ನು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಆಚರಿಸಲಾಯಿತು.

ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಹಾಗೂ ಮುಖ್ಯ ಯೋಜನಾಧಿಕಾರಿ (ಪ್ರಭಾರ) ಸೋಮಶೇಖರಮೆಸ್ತ ಹಾಗೂ ಜಿಲ್ಲಾ ಪಂಚಾಯತ, ನಿವೃತ್ತ ಮುಖ್ಯ ಯೋಜನಾಧಿಕಾರಿ ವಿ.ವಿ ಅಣ್ವೇಕರ ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸೋಮಶೇಖರ ಮೆಸ್ತ ಮಾತನಾಡಿ, ಸಂಖ್ಯಾ ಶಾಸ್ತçಜ್ಞ ಪ್ರೊ. ಪಿ. ಸಿ. ಮಹಾ¯ನೋಬಿಸ್ ರವರಕೊಡುಗೆಗಳನ್ನು ನೆನಪಿಸಿಕೊಳ್ಳುತ್ತಾ ಜಿಲ್ಲೆಯಲ್ಲಿ ಸಾಂಖ್ಯಿಕ ಇಲಾಖಾ ವತಿಯಿಂದ ಕೈಗೊಳ್ಳಲಾಗುವ ಜನನ-ಮರಣ ನೋಂದಣಿ, ಕೃಷಿ ಅಂಕಿ ಅಂಶಗಳು,

ಬೆಳೆ ಅಂದಾಜು ಸಮೀಕ್ಷೆ, ಸಕಾಲಿಕ ವರದಿ ಯೋಜನೆಯಡಿ ಬೆಳೆ ಸಮೀಕ್ಷೆ ಮೇಲ್ವಿಚಾರಣೆ, ಬೆಲೆ ವರದಿ, ಕೃಷಿ ಕೂಲಿ ವರದಿಗಳು, ಹಣ್ಣು ತರಕಾರಿ ಸಮೀಕ್ಷೆ,

ಧಾರಣೆ ವರದಿ, ಜಿಲ್ಲಾ ಅಂಕಿ ಅಂಶ ನೋಟದ ಪ್ರಕಟಣೆ ಮುಂತಾದ ಮಹತ್ವದ ಕಾರ್ಯಗಳ ಕುರಿತು ಮಾಹಿತಿ ನೀಡಿದರು.

ನಂತರ ಈ ವರ್ಷ ಸರ್ಕಾರವು ಆಯ್ಕೆ ಮಾಡಿದ ವಿಷಯವಾದ 75 years of National Sample Survey”ಎಂಬ ವಿಷಯದ ಕುರಿತು ಉಪನ್ಯಾಸದಲ್ಲಿ ರಾಷ್ಟ್ರೀಯ ಮಾದರಿ ಸಮೀಕ್ಷೆ ಉದ್ದೇಶ ಹಾಗೂ ಕಾರ್ಯವೈಖರಿಯನ್ನು ಸವಿಸ್ತಾರವಾಗಿ ವಿವರಿಸಿ,ರಾಷ್ಟ್ರೀಯ ಮಾದರಿ ಸಮೀಕ್ಷೆಯು ಸುಧೀರ್ಘ 75 ವರ್ಷಗಳಿಂದ ರಾಷ್ಟçದ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಲ್ಲಿ ಪ್ರಮುಖ

ಪಾತ್ರವಹಿಸಿರುವುದಾಗಿ ತಿಳಿಸಿದರು.

ಅಭಿವೃದ್ಧಿಯ ವ್ಯಾಖ್ಯಾನ, ಕೃಷಿ, ಸೇವಾ, ಕೈಗಾರಿಕೆ ಇತ್ಯಾದಿ ವಲಯಗಳಲ್ಲಿನ ಅಭಿವೃದ್ಧಿ ದರ, ದೇಶದ ಆಂತರಿಕ ಉತ್ಪನ್ನ, ಹಸಿವು ಮುಕ್ತಆರೋಗ್ಯಕರ ಸಮಾಜಕ್ಕಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಜವಾಬ್ದಾರಿಯುತವಾಗಿ ಸದ್ಬಳಕೆ ಮಾಡಿ ಸುಸ್ಥಿರತೆಯನ್ನು ಸಾಧಿಸುವ ಬಗ್ಗೆ ಆಗಮಿಸಿದ

ಎಲ್ಲರ ಭಾಗವಹಿಸುವಿಕೆಯೊಂದಿಗೆ ಚರ್ಚಾರೂಪದಲ್ಲಿ ಸ್ವಾರಸ್ಯಕರವಾಗಿ ವಿವರಿಸಿದರು.

ಜಿಲ್ಲಾ ಪಂಚಾಯತ, ನಿವೃತ್ತ ಮುಖ್ಯ ಯೋಜನಾಧಿಕಾರಿ ವಿ.ವಿ ಅಣ್ವೇಕರ ಮಾತನಾಡಿ, ಸಾಂಖ್ಯಿಕ ಇಲಾಖೆ, ಅಂಕಿ-ಅಂಶಗಳ ಹಾಗೂ ಸಮೀಕ್ಷೆಗಳಮಹತ್ವದ ಕುರಿತು ತಮ್ಮ ಹಿತನುಡಿಗಳನ್ನು ಹಂಚಿಕೊಡರು.ಸಾಂಖ್ಯಿಕ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಜು.2 ರಂದು ಕಾಲೇಜು ವಿದ್ಯಾರ್ಥಿಗಳಿಗೆ “ರಾಷ್ಟ್ರ ನಿರ್ಮಾಣಕ್ಕೆ ಯೋಜನೆಗಳನ್ನು

ರೂಪಿಸಲು ಗಣತಿ, ರಾಷ್ಟ್ರೀಯ ಮಾದರಿ ಸಮೀಕ್ಷೆ ಹಾಗೂ ಸಮೀಕ್ಷೆಗಳ ಮಹತ್ವ” ಎಂಬ ವಿಷಯದ ಕುರಿತು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿ ಕಾರವಾರದಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದ್ದು ಸದರಿ ಪ್ರಬಂಧ ಸ್ಪರ್ಧೆಯಲ್ಲ್ಲಿ ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಬಾಡ, ಸುಜಾತಾ ಸುಕ್ರುಗೌಡಾ ಪ್ರಥಮ, ದಿವೇಕರ ವಾಣಿಜ್ಯ ಕಾಲೇಜಿನ ಮಯೂರಿ ಗಣಪತಿ ಗೌಡ, ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಬಾಡ, ರವಿ ಕುಮಾರ ದ್ವಿತೀಯ, ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಬಾಡ, ಪ್ರೀತಿ ಪಿ. ಮೇಸ್ತ, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಐಶ್ವರ್ಯ ರಾಮು ಭೋವಿವಢ್ಡರ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಸಹಾಯಕ ಸಾಂಖ್ಯಿಕ ಅಧಿಕಾರಿ ಗಂಗಪ್ಪ ಹಣಬರ್ ರವರು ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಹಾಯಕ ಸಾಂಖ್ಯಿಕ ಅಧಿಕಾರಿ ಸಂತೋಷ ಕುಂಬಾರ ಇವರು ಪ್ರಾಸ್ತಾವಿಕವಾಗಿ ಕಾರ್ಯಕ್ರಮದ ಕುರಿತು ಮಾತನಾಡಿದರು.

ಸಮಾರಂಭದಲ್ಲಿ ಹೊನ್ನಾವರ ತಾಲೂಕ ಪಂಚಾಯತ ಸಹಾಯಕ ಸಾಂಖ್ಯಿಕ ಅಧಿಕಾರಿ ಲತಾ ನಾಯ್ಕ, ಭಟ್ಕಳ ಮೀನುಗಾರಿಕೆ ಇಲಾಖೆ ಸಹಾಯಕಸಾಂಖ್ಯಿಕ ಅಧಿಕಾರಿಲತಾ ನಾಯ್ಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಸಹಾಯಕ ಸಾಂಖ್ಯಿಕ ಅಧಿಕಾರಿ ರಾಘವೇಂದ್ರಹೆಗಡೆ, ಜಿಲ್ಲಾ ಪಂಚಾಯತ ಸಹಾಯಕ ಸಾಂಖ್ಯಿಕ ಅಧಿಕಾರಿ ನಾಗರಾಜ ನಾಯ್ಕ, ಪ್ರಗತಿ ಸಹಾಯಕರಾದ ಸಂದೇಶ ನಾಯ್ಕ, ಲಕ್ಷ್ಮಣ ರೆಡ್ಡಿ ಮತ್ತಿತರರು

ಉಪಸ್ಥಿತರಿದ್ದರು.

ಸಹಾಯಕ ಸಾಂಖ್ಯಿಕ ಅಧಿಕಾರಿ ಅಶ್ವಿನಿ ಎಸ್ ಮೇಸ್ತ, ಮತ್ತು ಸಾಂಖ್ಯಿಕ ನಿರೀಕ್ಷಕಿ ಪ್ರತೀಕ್ಷಾ ನಾಯ್ಕ , ಪ್ರಾರ್ಥಿಸಿದರು, ಸಹಾಯಕ ಸಾಂಖ್ಯಿಕಅಧಿಕಾರಿ ಪ್ರಸಾದ ಸ್ವಾಗತಿಸಿದರು. ಶಿಲ್ಪಾ ಗೌಡ ನಿರೂಪಿಸದರು. ಸಹಾಯಕ ಸಾಂಖ್ಯಿಕ ಅಧಿಕಾರಿ ಸರೋಜನಿ ನಾಯ್ಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net