

ಚಿಕ್ಕಮಗಳೂರು: ಗಾಯಕ ಡಾ.ಪಿ.ಬಿ.ಶ್ರೀನಿವಾಸ್ ಸಿರಿಕಂಠದಲ್ಲಿ ಮೂಡಿಬಂದಿರುವ ಕನ್ನಡಗೀತೆಗಳೂ ಎಂದೆAದಿಗೂ ಅಮರ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸಿ.ರಮೇಶ್ ತಿಳಿಸಿದರು.
ಮನೋರಂಜನಿ ಸಂಗೀತ ಮಹಾವಿದ್ಯಾಲಯದಿಂದ ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಚಂದ್ರಶೇಖರ ಭಾರತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗಾಯಕ ಡಾ.ಪಿ.ಬಿ.ಶ್ರೀನಿವಾಸ್ ಅವರ ೯೫ನೇ ವರ್ಷದ ಹುಟ್ಟುಹಬ್ಬದ ಸವಿ ನೆನಪಿನಲ್ಲಿ ಹಮ್ಮಿಕೊಂಡಿದ್ದ 'ಮಾಧುರ್ಯ ನಿಧಿಯ ಮಧುರ ಗಾನಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಿ.ಬಿ.ಶ್ರೀನಿವಾಸ್ ಅವರ ಹೆಸರನ್ನು ಚಿರಸ್ಥಾಯಿಯಾಗಿಸಲು ಮನೋರಂಜನಿ ಸಂಗೀತ ಸಭಾ ಪ್ರತಿವರ್ಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಕನ್ನಡ ಸಂಸ್ಕೃತಿ ಇಲಾಖೆ ಜಿಲ್ಲೆಯ ಕೇಂದ್ರಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ತಾಲೂಕು ಕೇಂದ್ರಗಳಲ್ಲಿ ಯಾವುದೇ ಘಟಕಗಳನ್ನು ಹೊಂದಿಲ್ಲ. ಹೀಗಾಗಿ ಗ್ರಾಮೀಣ ಭಾಗದ ಕಲಾವಿದರು ಇಲಾಖೆ ಸಂಪರ್ಕ ಸಾಧ್ಯವಾಗುತ್ತಿಲ್ಲ. ಜಿಲ್ಲಾಧ್ಯಂತ ಸಕ್ರಿಯರಾಗಿರುವ ಕಲಾವಿದರು ತಮ್ಮ ವ್ಯಾಪ್ತಿಯ ಬೆಳಕಿಗೆ ಬಾರದ ಕಲಾವಿದರ ಬಗ್ಗೆ ಇಲಾಖೆಗೆ ಮಾಹಿತಿ ನೀಡುವಂತೆ ಕೋರಿದರು.
ಕನ್ನಡ ಸಂಸ್ಕೃತಿ ಇಲಾಖೆ ಶಾಸ್ತಿçÃಯ , ಜಾನಪದ, ಕಲಾಪ್ರಕಾರಗಳ ಸಂಘಟಿತ ,ಅಸಂಘಟಿತ ಕಲಾವಿದರನ್ನು ಉತ್ತೇಜಿಸಲು ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಈ ಯೋಜನೆಗಳ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಮನೋರಂಜನಿ ಸಂಗೀತ ಸಭಾದ ಸ್ಥಾಪಕ ಬಿ.ಸಿ ಜಯರಾಮ್ ಮಾತನಾಡಿ, ಡಾ.ಪಿ.ಬಿ.ಶ್ರೀವಾಸ್ ಅವರು ದೇಶ ಕಂಡ ಅಪ್ರತಿಮ ಗಾಯಕರಾಗಿದ್ದಾರೆ. ಅವರು ಬರೀ ಸಂಗೀತಗಾರರಷ್ಟೆ ಅಲ್ಲದೆ ಸಂಸ್ಕೃತವೂ ಸೇರಿದಂತೆ ಎಂಟು ಬಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದರು . ಅವರು ಅತ್ಯುತ್ತಮ ವಾಗ್ಗೇಯಕಾರರೂ ಆಗಿದ್ದರೂ ಎಂದು ಬಣ್ಣಿಸಿದರು.
ಗಾಯಕ ಪಿ.ಬಿ.ಶ್ರೀನಿವಾಸ್ ಮತ್ತು ನಮ್ಮ ಕುಟುಂಬಕ್ಕೆ ನಿಕಟ ಸಂಪಕವಿತ್ತು. ಜಿಲ್ಲೆಗೆ ಬಂದರೆ ನಮ್ಮ ಮನೆಗೆ ಬರದೇ ಹೋಗುತ್ತಿರಲಿಲ್ಲಾ .೧೯೯೩ರಲ್ಲಿ ನಗರದ ವರ್ತಕರ ಸಂಘದ ೧೦ ನೇವರ್ಷದ ವಾರ್ಷಿಕೋತ್ಸವದ ಅದ್ದೂರಿ ಕಾರ್ಯಕ್ರಮದಲ್ಲಿ ಪಿ.ಬಿ.ಎಸ್ ಅವರನ್ನು ಸನ್ಮಾನಿಸಿದ ಅವಿಸ್ಮರಣೀಯ ಸಂದರ್ಭವನ್ನು ಮೆಲುಕು ಹಾಕಿದರು.
ಕಾರ್ಯಕ್ರಮದಲ್ಲಿ ವಿದ್ಯಾಯಲಯದ ಪ್ರಾಚಾರ್ಯೆ ಅಪರ್ಣ ಜಯರಾಮ್ ಹಾಜರಿದ್ದರು. ಗಾಯಕರಾದ ಸುರೇಂದ್ರ ನಾಯಕ್, ಅರ್ಚನಾ, ಶಾಲಿನಿ, ಶ್ರುತಿ ಅವರು ಪಿ..ಬಿ.ಶ್ರೀನಿವಾಸ್ ಹಾಡಿರುವ ಗೀತೆಗಳನ್ನು ಹಾಡುವ ಮೂಲಕ ರಂಜಿಸಿದರು.