ಯೋಧರಿಗೆ ನುಡಿನಮನ ಕರ್ತವ್ಯ : ಶ್ರೀವತ್ಸ ಗಾಂವಕರ್ ಕಿವಿಮಾತು

kargil divas
ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಲಯದಲ್ಲಿ ಕಾರ್ಗಿಲ್ ದಿವಸ ಕಾರ್ಯಕ್ರಮ ನಡೆಯಿತು
Published on

ಹೆಬ್ರಿ: ಕಾರ್ಗಿಲ್ ವಿಜಯೋತ್ಸವ ನಮ್ಮ ದೇಶದ ಹೆಮ್ಮೆಯ ಸಂಭ್ರಮದ ಆಚರಣೆ. ವೀರ ಯೋಧರಿಗೆ, ಹುತಾತ್ಮರಾದ ವೀರ ಕಲಿಗಳಿಗೆ ನಮನ ಸಲ್ಲಿಸುವ ದಿನ. ಕಾರ್ಗಿಲ್ ಅನ್ನು ಧೈರ್ಯ, ಸಾಹಸ, ಶೌರ್ಯದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಸಾಮಾಜಿಕ ಜಾಲತಾಣ ಸಹ ಸಂಚಾಲಕ ಶ್ರೀವತ್ಸ ಗಾಂವಕರ್ ಹೇಳಿದರು.

ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಲಯದ ಸಭಾಂಗಣದಲ್ಲಿ ಕಾರ್ಗಿಲ್ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶಕ್ಕಾಗಿ ಪ್ರಾಣ ತೆತ್ತ ಭಾರತಮಾತೆಯ ಯೋಧರಿಗೆ ನುಡಿನಮನ ದೇಶ ವ್ಯಾಪ್ತಿಯಾಗಿ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಆಡಳಿತ ಮಂಡಳಿ ಅಧ್ಯಕ್ಷ ಹೆಬ್ರಿ ಶ್ರೀ ಶೈಲೇಶ್ ಕಿಣಿ, ಮುಖ್ಯ ಶಿಕ್ಷಕಿ ಅಪರ್ಣಾ ಆಚಾರ್, ಶಕುಂತಳಾ ಉಪಸ್ಥಿತರಿದ್ದರು. ಸಮೃದ್ಧಿ ನಿರೂಪಿಸಿದರು. ಆಶಿಕಾ ಶೆಟ್ಟಿ ಸ್ವಾಗತಿಸಿದರು. ಧೃತಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net