

ಸಾಗರ: ಜೀವನದಲ್ಲಿ ಯಶಸ್ಸು ಕಂಡ ನಂತರ ಬೆಳೆದುಬಂದ ಸಮಾಜವನ್ನು ಮರೆಯಬಾರದು. ಸಮಾಜದ ಋಣ ತೀರಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ನಿವೃತ್ತ ಪ್ರಾಚಾರ್ಯ ಡಾ. ಸಿ.ಕೆ. ಮೂಕಪ್ಪ ನಾಯ್ಕ್ ಹೇಳಿದರು. ಸೇವೆಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಶುಕ್ರವಾರ ತಾಲೂಕು ಬಂಜಾರ ಸನ್ಮಾನ ಸ್ವೀಕರಿಸಿ ಮಾತನಾಡಿ, ನಾನು ೩೫ ವರ್ಷ ಎಲ್.ಬಿ.ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ, ಪ್ರಾಚಾರ್ಯನಾಗಿ ಸೇವೆ ಸಲ್ಲಿಸಿದ್ದೇನೆ. ಸಂಸ್ಥೆ ತೋರಿಸಿದ ಪ್ರೀತಿಗಿಂತ ಸಮಾಜ ನನ್ನನ್ನು ಸದಾ ಆದÀರದಿಂದ ನೋಡಿಕೊಂಡಿದ್ದು ಎಂದಿಗೂ ಮರೆಯಲಸಾಧ್ಯ ಎಂದರು. ಸಾಗರ ಉಪವಿಭಾಗೀಯ ಆಸ್ಪತ್ರೆಯಿಂದ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ವರ್ಗಾವಣೆಗೊಂಡಿರುವ ಡಾ. ಜಯಲಕ್ಷಿ÷್ಮÃ ನಾಯ್ಕ್ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಇಲ್ಲಿ ನನಗೆ ಬದುಕನ್ನು ಎದುರಿಸುವ ಧೈರ್ಯ ಕ್ರೋಡೀಕರಣವಾಗಿದೆ. ಇಲ್ಲಿ ಮಾಡಿದ ಸೇವೆ ತೃಪ್ತಿ ತಂದಿದ್ದು ನನ್ನ ಸೇವಾವಽಯಲ್ಲಿ ಸಮಾಜ ಸಹ ನನ್ನ ಜತೆ ನಿಂತಿದ್ದನ್ನು ಮರೆಯುವುದಿಲ್ಲ ಎಂದರು. ಸಮಾಜದ ಹಿರಿಯರಾದ ದೇವಸಿಂಗ್ ನಾಯ್ಕ್, ಸಂಘದ ಕಾರ್ಯದರ್ಶಿ ಶಿವಪ್ಪ ಡಿ.ಲಮಾಣಿ, ಜಿತೇಂದ್ರ ನಾಯ್ಕ್, ರಾಜ್ಯಾ ನಾಯ್ಕ್, ಟೀಕ್ಯಾ ನಾಯ್ಕ್, ಮಹೇಶ್ ನಾಯ್ಕ್, ಅರವಿಂದ್ ನಾಯ್ಕ್, ಪ್ರಾರ್ಥನಾ, ತೊಳ್ಚಾ ನಾಯ್ಕ, ದೇವೇಂದ್ರ ನಾಯ್ಕ್, ಟಾಕ್ರಾ ನಾಯ್ಕ್ ಇತರರಿದ್ದರು.