

ಮಂಗಳೂರು : ಸಂಗೀತ ಘರ್ ಬ್ಯಾನರ್‌ನಲ್ಲಿ ತಯಾರಾದ ಕೊಂಕಣಿ ಚಲನಚಿತ್ರ ಪಯಣ್ ಸೆ. 20ರಂದು ರಾಜ್ಯಾದ್ಯಂತ ತೆರೆಕಾಣಲಿದೆ.
ಮುಹೂರ್ತದಿಂದಲೇ ಕೌತುಕ ಸೃಷ್ಟಿಸಿದ ಈ ಚಿತ್ರದ ಟೀಜರ್ ಬಿಡುಗಡೆಯಾದದ್ದೇ ಕೊಂಕಣಿ ಚಲನಚಿತ್ರ ಪ್ರೇಮಿಗಳಿಂದ ಪ್ರಶಂಸೆಯ ಸುರಿಮಳೆ ಹರಿದು ಬಂದಿತ್ತು. ಮಂಗಳೂರು ಮತ್ತು ಪುತ್ತೂರಿನಲ್ಲಿ ನಡೆದ ಪ್ರೀಮಿಯರ್ ಶೋ ಹೌಸ್‌ಫುಲ್ ಪ್ರದರ್ಶನ ಕಂಡಿವೆ .ವೀಕ್ಷಕರಿಂದ ಕೊಂಕಣಿ ಚಲನಚಿತ್ರದ ಇತಿಹಾಸದಲ್ಲಿ ಪಯಣ ಒಂದು ಮೈಲಿಗಲ್ಲು ಎನ್ನುವ ಪ್ರಶಂಸೆ ವ್ಯಕ್ತವಾಗಿದೆ.
ನೀಟಾ ಜೊನ್ ಪೆರಿಸ್ ಚಿತ್ರದ ನಿರ್ಮಾಪಕರು. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕ ಜೊಯೆಲ್ ಪಿರೇರಾ ಬರೆದಿದ್ದು, ಸಾಹಿತ್ಯ ಮೆಲ್ವಿನ್ ಪೆರಿಸ್, ಸಂಗೀತ ನಿರ್ದೇಶನ ರೋಶನ್ ಡಿಸೋಜಾ ಆಂಜೆಲೊರ್ ಅವರದ್ದು.
ಪುತ್ತೂರಿನ ಯುವ ಪ್ರತಿಭೆ ಬ್ರಾಯನ್ ಸಿಕ್ವೇರಾ ನಾಯಕನಾಗಿ ಹಾಗೂ ಜಾಸ್ಮಿನ್ ಡಿಸೋಜಾ, ಕೇಟ್ ಪಿರೇರಾ ಮತ್ತು ಶೈನಾ ಡಿಸೋಜ, ನಾಯಕಿಯರಾಗಿ ನಟಿಸಿದ್ದಾರೆ. ನಟರಾದ ರೈನಲ್ ಸಿಕ್ವೇರಾ, ಲೆಸ್ಲಿ ರೇಗೊ, ಜೆರಿ ರಸ್ಕಿನ್ಹಾ, ವಾಲ್ಟರ್ ನಂದಳಿಕೆ, ಜೀವನ್ ವಾಸ್, ಜೊಸ್ಸಿ ರೇಗೊ, ಮೆಲಿಶಾ ಪಿಂಟೊ ಮುಖ್ಯ ಭೂಮಿಕೆಯಲ್ಲಿದ್ದಾರೆ. ಛಾಯಾಗ್ರಹಣ ವಿ. ರಾಮಾಂಜನೆಯ ಮತ್ತು ಸಂಕಲನ ಮೆವಿಮ್‌ಜೊಯೆಲ್ ಪಿಂಟೊ,
ಮಂಗಳೂರು, ಉಡುಪಿ ಸುತ್ತಮುತ್ತಲ ಪ್ರದೇಶಗಳಲ್ಲಿ ಪಯಣ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ಸೆ. 20ರಂದು ಮಂಗಳೂರು, ಸುರತ್ಕಲ್, ಪಡುಬಿದ್ರಿ, ಉಡುಪಿ, ಕುಂದಾಪುರ ಹಾಗೂ ಪುತ್ತೂರಿನಲ್ಲಿ ಏಕಕಾಲದಲ್ಲಿ ಪಯಣ್ ಬಿಡುಗಡೆಯಾಗಲಿದೆ.ಮುಂಬಯಿ ಹಾಗೂ ಗಲ್ಫ್ ದೇಶಗಳಲ್ಲಿ ಬಿಡುಗಡೆಯಾಗುವ ದಿನಾಂಕಗಳು ನಿಗದಿಯಾಗಿವೆ