ಪಾಯಲಿಂಗೇಶ್ವರ ಉತ್ಸವ ಅದ್ದೂರಿ

18Athanigrameen1
Published on

ಅಥಣಿ ಗ್ರಾಮೀಣ: ಶ್ರಾವಣ ಮಾಸದ ಕೊನೆಯ ಸೋಮವಾರ ನಿಮಿತ್ತ ಅಥಣಿ ತಾಲೂಕಿನ ದೇಸಾಯರಟ್ಟಿ ಗ್ರಾಮದಲ್ಲಿ ಶ್ರೀಪಾಯಲಿಂಗೇಶ್ವರ ದೇವರ ಜಾತ್ರೆ ಪಲ್ಲಕ್ಕಿ ಉತ್ಸವದೊಂದಿಗೆ ಸೋಮವಾರ ಸಂಭ್ರಮದಿಂದ ಜರುಗಿತು.

ಬೆಳಗ್ಗೆ ಎತ್ತಿನ ಬಂಡಿ ಮೂಲಕ ಕೃಷ್ಣಾನದಿಗೆ ತೆರಳಿ ಗಂಗಾಪೂಜೆ ನೆರವೇರಿಸಿ ಬಳಿಕ ಅಲ್ಲಿಯ ನೀರು ತಂದು ಪಾಯಲಿಂಗೇಶ್ವರ ಗದ್ದುಗೆಗೆ ಜಲಾಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು.

ಭಕ್ತರು ಪಾಯಲಿಂಗೇಶ್ವರ ದೇವರಿಗೆ ನೈವೇದ್ಯ ಅರ್ಪಿಸಿ ದರ್ಶನ ಪಡೆದರು. ಪಾಯಲಿಂಗೇಶ್ವರ ಮೂರ್ತಿ ಪಲ್ಲಕ್ಕಿಯಲ್ಲಿಟ್ಟು ಸಕಲ ವಾದ್ಯಮೇಳದೊಂದಿಗೆ ಮೆರವಣಿಗೆ ಮೂಲಕ ಗಣಿತೋಟಕ್ಕೆ ತೆರಳಿದರು. ಗ್ರಾಮಸ್ಥರೆಲ್ಲರೂ ಪೂಜೆ ನೆರವೇರಿಸಿ ಅಲ್ಲಿಂದ ಮರಳಿ ದೇವಸ್ಥಾನಕ್ಕೆ ಕರೆತಂದರು. ಭಕ್ತರು ಒಬ್ಬರಿಗೊಬ್ಬರು ಗುಲಾಲ ಎರಚಿದರು.

ಮಧ್ಯಾಹ್ನ ಅನ್ನಪ್ರಸಾದ ಸೇವೆ ನೆರವೇರಿತು. ವಿವಿಧ ಕಲಾವಿದರಿಂದ ಮನರಂಜನೆ ಹಾಗೂ ಸಾಮಾಜಿಕ ಕಾರ್ಯಕ್ರಮ ನಡೆದವು. ಮುಖಂಡರಾದ ವಿಜಯ ನಿಕ್ಕಂ, ಏಕನಾಥ ಚವ್ಹಾಣ, ಮುತ್ತಪ್ಪ ಕಳಸಣ್ಣವರ, ರಾಮಪ್ಪ ಚವ್ಹಾಣ, ಮಲ್ಲಪ್ಪ ಅವಟಿ, ಶಂಕರ ಪವಾರ, ತಾಪಂ ಮಾಜಿ ಸದಸ್ಯ ಅಪ್ಪಾಸಾಹೇಬ ಅವತಾಡೆ, ಶಿವಾಜಿ ನಿಕ್ಕಂ, ಅಪ್ಪಾಸಾಹೇಬ ಅವಟಿ, ನಾರಾಯಣ ಸಾವಂತ, ಅಣ್ಣಾಸಾಹೇಬ ಚವ್ಹಾಣ, ಸಿದ್ಧರಾಮ ಕಳಸಣ್ಣವರ, ಗಿರಿಮಲ್ಲ ಅವಟಿ, ಕರಬಾ ಯಾದವ, ಶಶಿಕಾಂತ ಪವಾರ, ಸದಾಶಿವ ಕೆಂಗಲಗುತ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net