ವೇತನ ನೀಡಿ ಇಲ್ಲವೆ ದಿನಸಿ ಕೊಡಿ

02 HHR P 05 (1)
ಹೊಳೆಹೊನ್ನೂರು ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರು ಪ್ರಭಾರ ಪ್ರಾಚಾರ್ಯ ಶಂಕರ್‌ಗೆ ಮನವಿ ಸಲ್ಲಿಸಿದರು.
Published on

ಹೊಳೆಹೊನ್ನೂರು: ಅತಿಥಿ ಉಪನ್ಯಾಸಕರು ಎದುರಿಸುತ್ತಿರುವ ತೊಂದರೆಗಳನ್ನು ಇಲಾಖೆಯ ಗಮನಕ್ಕೆ ತರಲು ಅತಿಥಿ ಉಪನ್ಯಾಸಕರ ತಂಡವೊAದು ವಿನೂತನ ತಂತ್ರ ಮಾಡಿದೆ. ಮೂರು ತಿಂಗಳಾದರೂ ಗೌರವ ಸಂಭಾವನೆ ಬಿಡುಗಡೆ ಮಾಡದ ಸರ್ಕಾರವೇ ದಿನಸಿ ಸರಬರಾಜು ಮಾಡುವಂತೆ ಮನವಿ ಮಾಡಿ ಅಽಕಾರಿಗಳ ಕಣ್ಣು ತೆರೆಸಲು ಪ್ರಯತ್ನಿಸಿದ್ದಾರೆ.

ಅತಿಥಿ ಉಪನ್ಯಾಸಕರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಗೌರವ ಸಂಭಾವನೆ ಬಿಡುಗಡೆ ವಿಳಂಬ ಮೊದಲ ಪ್ರಾಶಸ್ತ್ಯದಲ್ಲಿದೆ. ಪ್ರತಿ ವರ್ಷದಂತೆ ಈ ಬಾರಿಯೂ ವೇತನ ವಿಳಂಬವಾಗಿದ್ದು ವೇತನ ನೀಡುವವರೆಗಾದರೂ ದಿನಸಿ ಸಾಮಗ್ರಿಗಳನ್ನು ನೀಡುವಂತೆ ಹೊಳೆಹೊನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಪ್ರಾಚಾರ್ಯರಿಗೆ ಮನವಿ ಮಾಡಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಲೇಜಿನಲ್ಲಿ 11 ಅತಿಥಿ ಉಪನ್ಯಾಸಕರಿದ್ದು ಮೂರು ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಪನ್ಯಾಸಕರಿಗೆ ಮೂರು ತಿಂಗಳಿAದ ಗೌರವ ಸಂಭಾವನೆ ನೀಡಿಲ್ಲ. ವೇತನವಿಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಸಕಾಲದಲ್ಲಿ ವೇತನ ಸಿಗದ ಕಾರಣ ಆರ್ಥಿಕ ಅಡಚಣೆಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ವೇತನ ನೀಡುವುದು ತಡವಾದರೂ ಪರವಾಗಿಲ್ಲ, ಅಲ್ಲಿಯವರೆಗೆ ನಮ್ಮ ಕುಟುಂಬ ನಿರ್ವಹಣೆಗೆ ಪ್ರತಿ ತಿಂಗಳು 25 ಕೆಜಿ ಅಕ್ಕಿ, 5 ಕೆಜಿ ಟೊಮಾಟೊ, 10 ಕೆಜಿ ಈರುಳ್ಳಿ, ಬೇಳೆಕಾಳುಗಳು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮುಂತಾದ ದಿನಬಳಕೆಗೆ ಬೇಕಾದ ಹಾಲು, ಮೊಸರು ನೀಡಬೇಕೆಂದು ಕೇಳಿಕೊಂಡಿದ್ದಾರೆ.

ರಾಜ್ಯದಲ್ಲಿ 13 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕಳೆದ 22 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಡೆಯಾಗಿರುವ ವೇತನವನ್ನು ಸರ್ಕಾರ ತಕ್ಷಣ ಬಿಡುಗಡೆಗೊಳಿಸಬೇಕು. ನಮ್ಮ ದೀರ್ಘಾವಽಯ ಸೇವೆ ಪರಿಗಣಿಸಿ ಸೇವೆಯನ್ನು ಕಾಯಂಗೊಳಿಸಿ ಅತಿಥಿ ಉಪನ್ಯಾಸಕರ ಹಿತ ಕಾಪಾಡಬೇಕು.| ಸುರೇಶ್ ಸಾಗರ್ಅತಿಥಿ ಉಪನ್ಯಾಸಕ, ಹೊಳೆಹೊನ್ನೂರು ಪದವಿ ಕಾಲೇಜು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net